ಬೆಂಗಳೂರು, ಜುಲೈ.19.2021.( www.justkannad.in) ಇಂದು ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯು ಅತ್ಯಂತ ಸುರಕ್ಷಿತವಾಗಿ ಮುಕ್ತಾಯಗೊಂಡಿದೆ ಎಂದು ಶಿಕ್ಷಣ ಸಚಿವ ಡಾ.ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಡಾ.ಸುರೇಶ್ ಕುಮಾರ್ ಯಾವುದೇ ತೊಂದರೆಗಳಿಲ್ಲದೆ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯು ಅತ್ಯಂತ ಸುರಕ್ಷಿತವಾಗಿ ನಡೆದಿದೆ. ಹಾಗೂ ಪ್ರಮುಖವಾಗಿ ಮೂರು ವಿಷಯಗಳಲ್ಲಿ ಪರೀಕ್ಷೆಯು ನಡೆದಿದೆ ಎಂದರು.
ವಿಜ್ಞಾನ ವಿಷಯದಲ್ಲಿ ಒಟ್ಟು 8,43,976 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಣಿಯಾಗಿದ್ದು, ಇದರಲ್ಲಿ 8,40,849 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ಇನ್ನೂಳಿದ 3,127 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಸಮಾಜ ವಿಜ್ಞಾನ ವಿಷಯದಲ್ಲಿ ಒಟ್ಟು 8,24,689 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಣಿಯಾಗಿದ್ದು, ಇದರಲ್ಲಿ 8,21,822 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗಿದ್ದು, ಇನ್ನೂಳಿದ 2,867 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಹಾಗೂ ಗಣಿತ ವಿಷಯದಲ್ಲಿ ಒಟ್ಟು 7,83,882 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಣಿಯಾಗಿದ್ದು, ಒಟ್ಟು 7,81,530 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗಿದ್ದು, ಇನ್ನೂಳಿದ 2,352 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.
key words:Today – SSLC-exam -Minister – Suresh Kumar