ಬೆಂಗಳೂರು,ಡಿಸೆಂಬರ್,20,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಅಶ್ಲೀಲ ಪದ ಬಳಕೆ ಆರೋಪ ಪ್ರಕರಣ ಸಂಬಂಧ ತಮ್ಮನ್ನು ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಎಂಎಲ್ ಸಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ನನ್ನನ್ನು ರಾತ್ರಿಯಿಡಿ ಟೆರರಿಸ್ಟ್ ರೀತಿ ನೋಡಿದ್ರು. ಇಂದು ಇಂದು ಸತ್ಯಕ್ಕೆ ಜಯ ಸಿಕ್ಕಿದೆ .‘ನಾನು ದೂರು ಕೊಟ್ಟರೂ ಎಫ್ ಐ ಆರ್ ದಾಖಲಿಸಕೊಳ್ಳಲಿಲ್ಲ. ಖಾನಾಪುರದಲ್ಲಿ ದೂರು ನೀಡಿದ್ದೆ. ನಾನು ಸಭಾಪತಿಗಳಿಗೂ ದೂರು ನೀಡಿದ್ದೆ. ಆದರೆ ನನ್ನ ವಿರುದ್ದ ಸಾಕ್ಷ್ಯಾದಾರ ಇಲ್ಲದಿದ್ದರೂ ನನ್ನ ವಿರುದ್ದ ಎಫ್ ಐಆರ್ ಹಾಕಿದ್ದಾರೆ. ಸದನದಲ್ಲಿ ಏನೇ ಆದರೂ ಸಭಪತಿಗಳು ನೋಡಿಕೊಳ್ಳೂತ್ತಾರೆ. ಆದರೆ ಸುಳ್ಳು ಕೇಸ್ ಹಾಕಿಸಿ ನನ್ನನ್ನು ಬಂಧಿಸಿದ್ದಾರೆ. ನಿನ್ನೆ ಇಡೀ ರಾತ್ರಿ ದಿನ ನಿದ್ದೇ ಮಾಡದೆ ತಲೆನೋವು ಬಂದಿದೆ. ನೇರವಾಗಿ ಬೆಂಗಳೂರಿಗೆ ಹೋಗುತ್ತೇನೆ ಎಂದರು.
ನಾನು ರಾಜಕೀಯ ಸೈದ್ದಾಂತಿಕವಾಗಿ ಟೀಕೆ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳಿದುಕೊಳ್ಳಿ. ಡಿಕೆ ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬೆಳಗಾವಿಯಲ್ಲಿ ಕೇಳಿ ತಿಳಿದುಕೊಳ್ಳಿ. ಆದೇಶ ಪ್ರತಿ ಸಿಕ್ಕಿದ ಮೇಲೆ ಮಾತನಾಡುತ್ತೇನೆ ಎಂದು ಸಿಟಿ ರವಿ ಹೇಳಿದರು.
Key words: Today, truth, wins, CT Ravi