ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆ: ಪೊಲೀಸರ ಭೇಟಿ

ಮೈಸೂರು,ಫೆಬ್ರವರಿ,27,2025 (www.justkannada.in): ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್. ಡಿ ಕೋಟೆ ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ದಾಸಪ್ರಕಾಶ್ ಎಂಬವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾಗಿದೆ. ಶೌಚಾಲಯದ ಗುಂಡಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಸಲು ಮನೆ ಮಾಲೀಕರು ಮುಂದಾಗಿದ್ದರು. ಈ ವೇಳೆ ಶೌಚಾಲಯದ ಗುಂಡಿಯ ಒಳಗೆ ಮೂಳೆಗಳು ಪತ್ತೆಯಾಗಿದ್ದು, ತಕ್ಷಣ ಪೊಲೀಸರಿಗೆ ಮನೆ ಮಾಲೀಕರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಲ್ ಇನ್‌ ಸ್ಪೆಕ್ಟರ್ ಶಬೀರ್ ಹುಸೇನ್, ಡಿವೈಎಸ್ಪಿ ಗೋಪಾಲಕೃಷ್ಣ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.  ಕಳದ 7 ತಿಂಗಳುಗಳಿಂದ ದಾಸ್‌ ಪ್ರಕಾಶ್ ಕಾಣೆಯಾಗಿದ್ದು, ಈಗ ಮೃತದೇಹ ಪತ್ತೆಯಾಗಿರುವುದು ಅನೇಕ ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದೆ. ಕಳೇಬರದ ಮೂಳೆಗಳನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತಿದ್ದು ತನಿಖೆ ನಡೆಸಲು ಪೋಲಿಸರು ಮುಂದಾಗಿದ್ದಾರೆ.

Key words: Man, toilet, bones, detected, mysore