ಟೋಕಿಯೋ,ಆಗಸ್ಟ್,5,2021(www.justkannada.in): 41 ವರ್ಷಗಳ ನಂತರ, ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ಭೂಪಟದಲ್ಲಿ ಭಾರತೀಯ ಘನತೆ ಹೆಚ್ಚಿಸಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ 5-4ರಿಂದ ಗೆಲ್ಲುವ ಮೂಲಕ ಕಂಚಿನ ಪದಕ ಗೆದ್ದಿದೆ. ಭಾರತೀಯ ಹಾಕಿ ತಂಡ 1980 ರ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದೆ.
ಸೆಮಿಫೈನಲ್ ನಲ್ಲಿ ಭಾರತ ತಂಡ ಬೆಲ್ಜಿಯಂ ಎದುರು ಸೋತಿತ್ತು. ಇದರ ನಂತರ ಕಂಚಿಗಾಗಿ ಹೋರಾಟ ನಡೆಸಿತ್ತು. ಆರಂಭದಲ್ಲಿ ಭಾರತ ತಂಡವು ಜರ್ಮನಿಯ ವಿರುದ್ಧ 1-3 ರಿಂದ ಹಿಂದುಳಿದಿತ್ತು, ಆದರೆ ಏಳು ನಿಮಿಷಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಭಾರತೀಯ ಆಟಗಾರರು ಪಂದ್ಯದ ದಿಕ್ಕನ್ನು ತಿರುಗಿಸಿದರು.
ಇಡೀ ದೇಶವೇ ಈ ಗೆಲುವನ್ನು ಸಂಭ್ರಮಿಸುತ್ತಿದೆ.
Key words: Tokyo Olympics- Bronze medal-winning -Indian hockey -team.