ಮೈಸೂರು,ಮಾರ್ಚ್,25,2021(www.justkannada.in): ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಾಳಿನ 26ರ ಭಾರತ್ ಬಂದ್ ಬದಲು ರಾಜ್ಯಾದ್ಯಂತ ಕೃಷಿ ಕಾಯ್ದೆಗಳು ಶವಯಾತ್ರೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ 3ರಿಂದ 4 ಬಾರಿ ಬಂದ್ ಆಚರಣೆ ಮಾಡಲಾಗಿದೆ ಇದಕ್ಕೆ ರಾಜ್ಯದ ಜನರು ರೈತರು ಅಂದು ಅಭೂತಪೂರ್ವ ಬೆಂಬಲ ನೀಡಿದ್ದಾರೆ ಆದರೆ ಈ ಬಾರಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿರುವ 26ರ ಭಾರತ್ ಬಂದ್ ಬಗ್ಗೆ ಪೂರ್ವಯೋಜಿತವಾಗಿ ರಾಜ್ಯದ ಎಲ್ಲ ರೈತ. ಜನಪರ ಸಂಘಟನೆಗಳು ಚರ್ಚಿಸದೆ ಇರುವ ಕಾರಣ ಯಶಸ್ವಿ ಬಂದ್ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ರಾಜ್ಯದಲ್ಲಿ ಬಂದ್ ಕಾರ್ಯಕ್ರಮದ ಬದಲು ಎಲ್ಲಾ ಜಿಲ್ಲೆಯಲಿ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ರಾಷ್ಟ್ರೀಯ ಕಿಸಾನ್ ಸಂಯುಕ್ತ ಮೋರ್ಚಾ ಕರೆಯನ್ನು ಈ ರೀತಿಯಲ್ಲಿ ಕರ್ನಾಟಕದ ರೈತರು ಬೆಂಬಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಕಿಸಾನ್ ಮಹಾ ಪಂಚಾಯಿತ್ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ಪ್ರಜಾಸತ್ತಾತ್ಮಕ ಹೋರಾಟದ ದಮನಕಾರಿ ನೀತಿ ರೈತ ಚಳುವಳಿ ಪ್ರಬಲವಾಗುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಸರ್ಕಾರ ವಾಮಮಾರ್ಗ ಮೂಲಕ ಚಳುವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ರಾಜ್ಯ ಸರ್ಕಾರ ಕೂಡಲೇ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಬೇಕು ಇದು ರಾಜ್ಯದ ರೈತರ ಹೋರಾಟವನ್ನು ಹತ್ತಿಕ್ಕುವ ಕಾರ್ಯವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ENGLISH SUMMARY…
Mock funeral yatra of agri policies tomorrow in place of Bharath Bundh – Kuruburu Shantakumar
Mysuru, Mar. 25, 2021 (www.justkannada.in): Farmer leader Kuruburu Shantakumar today informed that they have decided to take out a mock funeral yatra opposing the Govt. of India’s amended Agri policies tomorrow that is on March 26 in place of Bharath Bundh.
Speaking to the press persons about this farmer Leader Kurubur Shantakumar said, “3-4 bunds have taken place in the State in the last six months and the people of the state and the farmers have supported us a lot. The Rashtriya Samyukta Kisan Morcha has given a call for Bharath Bundh on March 26, that is tomorrow. As all the farmer and pro-people organizations have not discussed this and as no preparations have been made we can’t assure you that it will be successful. Hence we have decided to take out a mock funeral procession of the Govt. of India’s amended Agri policies, in all the districts of the State. The farmers of Karnataka are extending their support to the Bharath Bundh tomorrow in this way.”
Keywords: Bharath Bundh/ March 26/ Mock funeral procession/ Govt. of India/ amended agri policies
Key words: Tomorrow –barath bandh- protests – farmer leader- Kuruburu Shanthakumar.