ಮೈಸೂರು,ಸೆಪ್ಟಂಬರ್,30,2021(www.justkannada.in): ನಾಳೆ ವಿಶ್ವ ಹಿರಿಯ ನಾಗರೀಕರ ದಿನ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರೀಕರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಹಾಲಪ್ಪ ಆಚಾರ್ ತಿಳಿಸಿದರು.
ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಸಚಿವ ಹಾಲಪ್ಪ ಆಚಾರ್, ನಾಳೆ ವಿಶ್ವ ಹಿರಿಯ ನಾಗರೀಕರ ದಿನ ಹಿನ್ನೆಲೆ, ಪ್ರತೀ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಿರಿಯರಿಗೆ ಗೌರವ ಸಲ್ಲಿಸುವುದು. ಸಾಧನೆ ಮಾಡಿದ ಹಿರಿಯ ನಾಗರೀಕರಿಗೆ ಸನ್ಮಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನ ಗುರ್ತಿಸಲಾಗಿದೆ. ಈಗಾಗಲೇ ಸಮಿತಿ ಮಾಡಿದ್ದು, ಸಮಿತಿ ಆಯ್ಕೆಯ ಪ್ರಕಾರ, ಶಿಕ್ಷಣದಲ್ಲಿ ಗುರುಪಾದಪ್ಪ ಅಂಚೇರ, ಸಾಹಿತ್ಯ ಡಾ. ಕರಿ ವೀರಪ್ರಭು, ಕಲಾ ಶರಣಪ್ಪ ಗೋನಾಳ , ಸಮಾಜ ಸೇವೆ ಜನಾರ್ಧನ್, ಕ್ರೀಡಾ ಅಂಚೆ ಅಶ್ವಥ್, ಕಾನೂನು ಕಿಷನ್ ರಾವ್, ಸಂಸ್ಥೆ ಡಾ.ಬಿ.ಆರ್ ಅಂಬೇಡ್ಕರ್ ಕಲ್ಚರ್ ಅಂಡ್ ವೆಲ್ಫೇರ್ ಸೊಸೈಟಿ. ವಿಶೇಷ ಸಾಧನೆ ಮಾಡಿದ ಹಿರಿಯ ನಾಗರೀಕರಿಗೂ ಪುರಸ್ಕಾರ ನೀಡಲಾಗುತ್ತದೆ ಎಂದರು.
ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಜಾರಿ ಮಾಡಲಾಗಿದ್ದು ಟೋಲ್ ಫ್ರೀ 14567ಗೆ ಚಾಲನೆ ನೀಡಲಾಗಿದೆ. ಹೋಮ್ ಕೇರ್, ಪಿಂಚಣಿ, ಉಚಿತ ಕಾನೂನು ಮಾರ್ಗದರ್ಶನ ಸೇರಿದಂತೆ ಹಲವು ಅರಿವು ಮೂಡಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಸಹಾಯವಾಣಿ ಇದೆ. ಆದ್ರೂ ಹಿರಿಯ ನಾಗರೀಕರಿಗೆ ಸಹಾಯವಾಣಿಗೆ ಅನುಕೂಲವಾಗಲಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಕೋವಿಡ್ ನಿಂದ ಮೃತಪಟ್ಟವರ ಮಕ್ಕಳಿಗೆ ಶಿಕ್ಷಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್, ರಾಜ್ಯದಲ್ಲಿ ತಂದೆತಾಯಿ ಕಳೆದುಕೊಂಡವರು 454 ಮಕ್ಕಳಿದ್ದಾರೆ. ಒಬ್ಬರನ್ನ ಕಳೆದುಕೊಂಡವರ ಸಂಖ್ಯೆ 3,401. ನಮ್ಮ ಸ್ಕೀಂನಿಂದ ಅವರಿಗೆ ಆರ್ಥಿಕ ಸಹಾಯ ನೀಡಲಾಗಿದೆ. ತಿಂಗಳಿಗೆ 3,450 ರೂ. ನೀಡ್ತಿದ್ದೇವೆ ತಂದೆ, ತಾಯಿ ಇಬ್ಬರೂ ಇಲ್ಲದೆ ಇಬ್ಬರು ಮಕ್ಕಳು ಮಾತ್ರ ಇದ್ದಾರೆ. ಚೈಲ್ಡ್ ಕೇರ್ ಸೆಂಟರ್ ನಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದವರು ಅವರ ಸಂಬಂಧಿಕರ ಸುಪರ್ದಿಯಲ್ಲಿದ್ದಾರೆ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಮರಳಿನ ಕೊರತೆ ಇದೆ. 10 ದಶಲಕ್ಷ ಟನ್ ಮರಳು ಕೊರತೆ ಇದೆ. 45 ದಶಲಕ್ಷ ಟನ್ ನಮಗೆ ಮರಳು ಅವಶ್ಯಕತೆ ಇದ್ದರೆ, ಕೇವಲ 35 ದಶ ಲಕ್ಷ ಟನ್ ಮಾತ್ರ ಪೂರೈಕೆ ಆಗ್ತಿದೆ. ಎಂ ಸ್ಯಾಂಡ್ ಆದ್ರೂ ಹೆಚ್ಚಳ ಮಾಡಬೇಕು ಅಥವಾ ಬೇರೆ ಏನಾದ್ರೂ ಪರಿಹಾರ ಹುಡುಕಬೇಕು. ಹೊಸ ಮರಳು ನೀತಿಗೆ ಇನ್ನೂ ಕ್ಯಾಬಿನೆಟ್ ಅಪ್ರೂವ್ ಆಗಿಲ್ಲ. ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ. ಹಿಂದಿನ ಸಚಿವರು ಯಾಕೆ ಹೇಳಿದ್ದರೋ ಗೊತ್ತಿಲ್ಲ. ನಮ್ಮದೇ ಸರ್ಕಾರ ಇತ್ತು, ಆದರೆ ನನಗೆ ಸುಳ್ಳು ಹೇಳಲು ಬರುವುದಿಲ್ಲ. ಮರಳು ನೀತಿ ಸರಳವಾಗಿ ಮಾಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ ಎಂದರು.
ಕೇಂದ್ರ ಸರ್ಕಾರದವರು 9 ಬ್ಲಾಕ್ಸ್ ಚಿನ್ನದ ನಿಕ್ಷೇಪ ತೆಗೆಯಲು ಸ್ಥಳ ಗುರುತಿಸಿ ರಾಜ್ಯಕ್ಕೆ ನೀಡಿದ್ದಾರೆ. ಆದಷ್ಟು ಶೀಘ್ರದಲ್ಲಿ ನೋಟಿಫಿಕೇಷನ್ ಹೊರಡಿಸಿ ಮುಂದುವರೆಯುತ್ತೆವೆ. ಹರಾಜು ಪ್ರಕ್ರಿಯೆ ಮೂಲಕ ಚಿನ್ನದ ನಿಕ್ಷೇಪ ತೆಗೆಯಲು ಅವಕಾಶ ನೀಡುತ್ತೇವೆ. ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ಇದರಿಂದ ಬರಲಿದೆ ಎಂದರು.
Key words: Tomorrow –honors- senior citizens – Minister Halappa Achar.