ಬೆಂಗಳೂರು, ಜುಲೈ 30, 2023 (www.justkannada.in): 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಾಳೆ (ಜುಲೈ 31) ಆಗಿದೆ.
ಈ ವರ್ಷ ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ಸೂಚಿಸಿದೆ. ಹೀಗಾಗಿ ನಾಳೆಯೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಿದೆ.
ಈ ಬಾರಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ನಲ್ಲಿ ಯಾವುದೇ ಪ್ರಮುಖ ದೋಷಗಳು ಕಂಡುಬಂದಿಲ್ಲ, ಜುಲೈ 27 ರವರೆಗೆ 5 ಕೋಟಿಗೂ ಹೆಚ್ಚು ರಿಟರ್ನ್ಗಳನ್ನು ಸಲ್ಲಿಸಲಾಗಿದೆ.
ಅಂದಹಾಗೆ ನೀವು ಜುಲೈ 31 ರ ಗಡುವು ದಿನಾಂಕವನ್ನು ತಪ್ಪಿಸಿಕೊಂಡರೆ, ನೀವು ಡಿಸೆಂಬರ್ 31 ರವರೆಗೆ ತಡವಾಗಿ ರಿಟರ್ನ್ ಸಲ್ಲಿಸಬಹುದು, ಆದರೆ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತದೆ. ವಿಳಂಬ ಶುಲ್ಕದ ಜೊತೆಗೆ, ಬಾಕಿ ಇರುವ ಯಾವುದೇ ತೆರಿಗೆ ಮೊತ್ತವನ್ನು ಪಾವತಿಸುವವರೆಗೆ ದಂಡದ ಬಡ್ಡಿಯನ್ನು ಸಹ ವಿಧಿಸಲಾಗುತ್ತದೆ.
ತೆರಿಗೆದಾರರು ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡಿದಷ್ಟೂ ಅವರಿಗೆ ಹೆಚ್ಚಿನ ಬಡ್ಡಿ ಉಂಟಾಗುತ್ತದೆ.