ಮೈಸೂರು,ಮಾರ್ಚ್,9,2023(www.justkannada.in): ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ವಿಚಾರದ ಬಗ್ಗೆ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಸುಳಿವು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ಸಿ.ಎಸ್ ಪುಟ್ಟರಾಜು, ಸುಮಲತಾ ಅಂಬರೀಶ್ ನಾಳೆ ಬಿಜೆಪಿ ಸೇರ್ತಾರೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲೇ ಪಕ್ಷ ಸೇರ್ಪಡೆಗೆ ಪ್ಲ್ಯಾನ್ ಮಾಡಿದ್ದರು. ಆದರೇ, ಸರ್ಕಾರಿ ಕಾರ್ಯಕ್ರಮ ಹಿನ್ನೆಲೆ ಅವಕಾಶ ಸಿಗಲಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಮೋದಿಯೇ ಬರಲಿ, ಅಮಿತ್ ಶಾನೇ ಬರಲಿ ಮಂಡ್ಯದಲ್ಲಿ ಜೆಡಿಎಸ್ ನದ್ದೇ ಪ್ರಾಬಲ್ಯ
ರಾಜ್ಯಕ್ಕೆ ಮೋದಿಯೇ ಬರಲಿ. ಅಮಿತ್ ಶಾನೇ ಬರಲಿ ಮಂಡ್ಯದಲ್ಲಿ ಜೆಡಿಎಸ್ ನದ್ದೇ ಪ್ರಾಬಲ್ಯ. ಮಂಡ್ಯದಲ್ಲಿ ಬೇರೆಯವರ ಆಟ ನಡೆಯಲ್ಲ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಮೈಸೂರು ಬೆಂಗಳೂರು ಹೆದ್ದಾರಿ ನಿರ್ಮಾಣದಲ್ಲಿ ಜೆಡಿಎಸ್ ಪಾಲು ಇದೆ.
ಮೈಸೂರು ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣಧಲ್ಲಿ ಜೆಡಿಎಸ್ ಪಾಲು ಕೂಡ ಇದೆ. ಮೈತ್ರಿ ಸರ್ಕಾರದಲ್ಲೇ ಹೆದ್ದಾರಿಗೆ ಅನುಮೋದನೆ ನೀಡಲಾಗಿತ್ತು. ಪ್ರತಾಪ್ ಸಿಂಹ ಹೆಜ್ಜೆ ಹೆಜ್ಜೆಗೂ ಚೀಫ್ ಇಂಜಿನಿಯರ್ ರೀತಿ ಆಡ್ತಾರೆ. ಕೇಂದ್ರ ಸರ್ಕಾರ ಪ್ರತಾಪ್ ಸಿಂಹಗೆ ಗುತ್ತಿಗೆ ಕೊಟ್ಟಿದೆಯಾ..? ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು-ಮೈಸೂರು ಹೈವೇ ಅವೈಜ್ಞಾನಿಕವಾಗಿದೆ. ಹೈವೇಯಲ್ಲಿ ಅಪಘಾತ ಸಂಭವಿಸುತ್ತದೆ. ದಿನನಿತ್ಯ ಎರಡು ಮೂರು ಅಪಘಾತವಾಗುತ್ತಿದೆ. ನ್ಯೂನ್ಯತೆ ಇದ್ದರೇ ಸರಿಪಡಿಸಲಿ ಎಂದು ಸಿಎಸ್ ಪುಟ್ಟರಾಜು ಆಗ್ರಹಿಸಿದರು.
Key words: Tomorrow- MP -Sumalatha Ambarish -will -join -BJP – JDS MLA- CS Puttaraju.