ಮೈಸೂರು,ಮಾರ್ಚ್,07,2021(www.justkannada.in) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ 12ಗಂಟೆಗೆ ಆಯವ್ಯಯ ಮಂಡಿಸಲಿದ್ದು, ಸಿಎಂ ಬಿ.ಎಸ್.ವೈ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಜೆಟ್ ಆಗಿದೆ. ಈ ಬಾರಿ ಬಜೆಟ್ ನಲ್ಲಿ ಆದಾಯ ಕೊರತೆ ಸಾಧ್ಯತೆಯಿದೆ.ರೈತರ ಹೋರಾಟ ಹಿನ್ನಲೆ, ಕೃಷಿ ಮಾರುಕಟ್ಟೆಗೆ ನೂತನ ಯೋಜನೆ ಸಾಧ್ಯತೆ. ಕೃಷಿ ಮೂಲಸೌಕರ್ಯ ವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚು ಒತ್ತು. ಪ್ರತಿ ತಾಲೂಕಿನಲ್ಲಿ ಗೋ ಶಾಲೆ ಆರಂಭಿಸಲು ಆರ್ಥಿಕ ನೆರವು. ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಇಳಿಕೆ ಡೌಟ್?, ಜನರ ನಿರೀಕ್ಷೆ ತಕ್ಕ ಬಜೆಟ್ ಸಿಎಂ ನೀಡಲಿದ್ದಾರೆ.
ಕಳೆಗುಂದಿರುವ ಪ್ರವಾಸೋದ್ಯಮಕ್ಕೆ ನೀಡುತ್ತಾರ ಟಾನಿಕ್. ಮೈಸೂರಿನ ಶಾಸಕರು, ಸಂಸದರ ಒತ್ತಾಯದಂತೆ ನೀರು ಸರಬರಾಜು ಮತ್ತು ಜಲ ಮಂಡಳಿ ನಿರ್ಮಾಣಕ್ಕೆ ಬಜೆಟ್ ನಲ್ಲಿ ಉತ್ತರ ಸಿಗಲಿದೆಯೇ?, ಈ ಬಾರಿಯ ರಾಜ್ಯ ಬಜೆಟ್ ಕುತೂಹಲಕ್ಕೆ ಕಾರಣವಾಗಿದೆ.
key words : Tomorrow-Multiple-prospects-State-Management-Budget-Presentation-Mysore-Development-get it-Bumper-Donation