ಬೆಂಗಳೂರು,ನವೆಂಬರ್,9,2020(www.justkannada.in): ನವೆಂಬರ್ 3 ರಂದು ನಡೆದ ಆರ್.ಆರ್ ನಗರ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು ನಾಳೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ನಾಳಿನ ಮತ ಎಣಿಕೆಗೆ ಸಿದ್ಧತೆ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ. ನಾಳೆ ಬೆಳಿಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂ ತೆಗೆಯಲಾಗುತ್ತದೆ. ಬೆಳಿಗ್ಗೆ 8ರಿಂದ ಮತದಾನ ಎಣಿಕೆ ಪ್ರಾರಂಭವಾಗಲಿದೆ. 8 ರಿಂದ 8.30ರವರೆಗೆ ಅಂಚೆಮತ ಎಣಿಕೆ ನಡೆಯಲಿದೆ. 8.30ರ ನಂತರ ಇತರೇ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
4 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು 28 ಕೌಂಟಿಂಗ್ ಟೇಬಲ್ ಗಳನ್ನ ವ್ಯವಸ್ಥೆ ಮಾಡಲಾಗಿದೆ. ಒಂದು ಟೇಬಲ್ ಗೆ ಮೂವರು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಮತ ಎಣಿಕೆಗೆ 250 ಸಿಬ್ಬಂದಿಯನ್ನ ನಿಯೋಜಿಸಲಾಗಿದ್ದು ಬೆಳಿಗ್ಗೆ 7 ಗಂಟೆಗೆ ಅಯಾ ಪಕ್ಷದ ಏಜೆಂಟ್ ಗಳು ಬರಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
Key words: Tomorrow- RR nagar- by-election -vote count-BBMP Commissioner -Manjunath Prasad