ಹಾಸನ,ಸೆ,7,2019(www.justkannada.in): ಪ್ರವಾಹ ಮಳೆಯಿಂದಾಗಿ ಆಗಿರುವ ನಷ್ಟ ಎನ್ ಡಿಆರ್ ಎಫ್ ನಿಯಾಮಾವಳಿ ಅಡಿ ಬರಲ್ಲ. ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ನಮಗೆ ಕಾಲು ಭಾಗ ಅರ್ಹತೆ ಇಲ್ಲ. ಈ ಕಾರಣದಿಂದ ನೆರೆ ಪರಿಹಾರ ತಡವಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.’
ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಮಾಧುಸ್ವಾಮಿ, 32 ಸಾವಿರ ಕೋಟಿ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿರುವುದು ನಿಜ. ಆದರೆ ಆಗಿರೋ ನಷ್ಟ ಎನ್ ಡಿ ಆರ್ ಎಫ್ ನಿಯಾಮಾವಳಿ ಅಡಿ ಬರಲ್ಲ. ನಮ್ಮದೆ ಇಲಾಖೆಯಲ್ಲಿ 400 ಕೋಟಿ ನಷ್ಟವಾಗಿದೆ. ಎನ್ ಡಿ ಆರ್ ಎಫ್ ನಿಯಮಾವಳಿ ಅಡಿಯಲ್ಲಿ 11 ಕೋಟಿ ರೂ ಮಾತ್ರ ಬರುತ್ತೆ. ಹೀಗಾಗಿ ನಿಯಮಾವಳಿ ಮೀರಿ ನೆರೆ ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಅದ್ದರಿಂದ ನೆರೆ ಪರಿಹಾರ ವಿಳಂಬವಾಗಿದೆ ಎಂದರು.
ಹೆಚ್.ಡಿ ರೇವಣ್ಣ ಇಷ್ಟ ಬಂದಂತೆ ಕೆಎಂಎಫ್ ಚುನಾವಣೆ ನಡೆಸಲು ಮುಂದಾಗಿದ್ರು..
ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಪ್ಲಾನ್ ಮಾಡಿ ಕೆಎಂ ಎಫ್ ಚುನಾವಣೆ ನಡೆಸಲು ಹೆಚ್.ಡಿ ರೇವಣ್ಣ ಮುಂದಾಗಿದ್ದರು. ತಮಗೆ ಇಷ್ಟಬಂದಂತೆ ಚುನಾವಣೆ ನಡೆಸಲು ಮುಂದಾಗಿದ್ದರು. ಹೀಗಾಗಿ ನಾವು ಚುನಾವಣೆಗೆ ತಡೆ ನೀಡಿ ಬಳಿಕ ಚುನಾವಣೆ ನಡೆಸಿದ್ದೇವೆ. ನಾವು ಹೆಚ್.ಡಿ ರೇವಣ್ಣ ಅವರ ಮಟ್ಟಕ್ಕೆ ಇಳಿಯೋದಿಲ್ಲ ಎಂದು ಸಚಿವ ಮಾಧುಸ್ವಾಮಿ ಲೇವಡಿ ಮಾಡಿದರು.
ಡಿಕೆಶಿ ಬಂಧನವಾಗಲಿ ಎಂಬ ಬಯಕೆ ಇಲ್ಲ..
ಹಾಗೆಯೇ ಇಡಿಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ಡಿಕೆಶಿ ಬಂಧನವಾಗಲಿ ಎಂಬ ಬಯಕೆ ನಮ್ಮಲ್ಲಿಲ್ಲ. ಡಿ.ಕೆ ಶಿವಕುಮಾರ್ ಇದರಿಂದ ಸಾರ್ವಜನಿಕವಾಗಿ ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ ಎಂದುಕೊಂಡಿದ್ದವು. ಅವರು ಹಾಗೆಯೇ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅಪರಾಧಿ ಎಂದು ಇಡಿ ಹೇಳಿಲ್ಲ. ತನಿಖೆ ಹಂತದಲ್ಲಿ ಸಹಕರಿಸಿಲ್ಲ ಎಂದು ಬಂಧಿಸಿದ್ದಾರೆ ಎಂದರು.
key words: Tong- HD Revanna-cause – delay – Flood relief-minister madhuswamy