ನವದೆಹಲಿ,ಸೆಪ್ಟಂಬರ್,30,2023(www.justkannada.in): 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬದಲಾವಣೆಗೆ ಗಡುವು ವಿಸ್ತರಣೆ ಮಾಡಲಾಗಿದೆ.
2 ಸಾವಿರ ನೋಟು ಬದಲಾವಣೆಗೆ ಇಂದು ಕಡೆಯ ದಿನವಾಗಿತ್ತು. ಇದೀಗ ಅಕ್ಟೋಬರ್ 7ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿದೆ. ಅಕ್ಟೋಬರ್ 8 ರಿಂದ ಬ್ಯಾಂಕುಗಳು 2,000 ರೂಪಾಯಿ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವುದನ್ನ ನಿಲ್ಲಿಸಲಿವೆ.
ಜನರು ಆರ್ ಬಿಐ 19 ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳನ್ನ ವಿನಿಮಯ ಮಾಡಿಕೊಳ್ಳಬಹುದು. ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ ಆರ್ಬಿಐನ ವಿತರಣಾ ಕಚೇರಿಗಳಿಗೆ ಅಂಚೆ ಮೂಲಕ ಕಳುಹಿಸಬಹುದು ಎಂದು ಆರ್ ಬಿಐ ಹೇಳಿದೆ.
ಈ ಹಿಂದೆ ಆರ್ ಬಿಐ ಈ ವರ್ಷದ ಮೇ 19 ರಂದು ಸುತ್ತೋಲೆ ಹೊರಡಿಸಿ, ಸೆಪ್ಟೆಂಬರ್ 30 ರೊಳಗೆ 2000 ರೂ.ಗಳ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿತ್ತು.
Key words: 2 thousand rupee-notes- exchange – Extension – deadline