ಮೈಸೂರು,ಜುಲೈ,30,2021(www.justkannada.in): 30 ಸಾವಿರ ಕೋಟಿ ಲೂಟಿ, 2 ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿದ್ಧೆ ಎರಡು ವರ್ಷದ ಇವರ ಸಾಧನೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಇಂದು ಸುದ್ಧಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರ ವೈಫಲ್ಯದ ಕುರಿತಾದ ಜನ ಪೀಡತ ಸರ್ಕಾರ ಎಂಬ ಕೈಪಿಡಿ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, 30 ಸಾವಿರ ಕೋಟಿ ಲೂಟಿ, 2ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿರುವುದು. ಇವರ ಸಾಧನೆ. ಎಲ್ಲಾ ಟೆಂಡರ್ ಗಳಿಗೆ 20% ಕಮಿಷನ್ ತೆಗೆದುಕೊಳ್ಳೊದು ಇವರ ಸಾಧನೆ. ಭ್ರಷ್ಟಾಚಾರ ಅಜಾರಕತೆ ದುರಾಡಳಿತ ಬಿಜೆಪಿ ಸಾಧನೆ. ನೀಟ್ ಪರೀಕ್ಷೆ ತಂದು ಸಾಮಾನ್ಯರು ವೈದ್ಯರಾಗುವುದನ್ನು ತಪ್ಪಿಸಿದಿರಿ. ಇದು ನಿಮ್ಮ ಸರ್ಕಾರದ ಸಾಧನೆ ಎಂದು ಹರಿಹಾಯ್ದರು.
ಲಿಂಗಾಯತ ಸೂಕ್ಷ್ಮ ಸಂಸ್ಕೃತಿ ಇರುವ ಸಮುದಾಯ. ಅಂತಹ ಸಮುದಾಯದ ನಾಯಕನ್ನು ಕಣ್ಣೀರಿ ತರಿಸಿ ಕೆಳಗಿಳಿಸುವುದು ಸರಿಯಲ್ಲ. ಯಾಕೆ ಯಡಿಯೂರಪ್ಪ ಕೆಳಗಿಳಿಸಿದಿರಿ. ಜನಸಾಮಾನ್ಯರ ನೀವು ಉತ್ತರ ಕೊಡಿ. ಮನುವಾದಿಗಳು ಬಸವಣ್ಣನನ್ನ ಕೆಳಗಿಳಿಸಿದ ಹಾಗೇ ಬಿಜೆಪಿ ಹಾಗೂ ಆರ್ ಎಸ್ ಎಸ್ ಯಡಿಯೂರಪ್ಪರವರನ್ನು ಕೆಳಗಿಳಿಸಿದೆ. ಯಡಿಯೂರಪ್ಪ ವಯಸ್ಸಿಗೆ ಬೆಲೆ ಇಲ್ಲವೇ. ಯಡಿಯೂರಪ್ಪ ಸಿಡಿ, ಇಡಿ ಇವುಗಳ ಮೂಲಕ ಬ್ಲಾಕಮೇಲ್ ಮಾಡುವ ಮೂಲಕ ಅವರನ್ನು ಕೆಳಗಿಳಿಸುವ ಕೆಲಸ ಮಾಡಿದ್ದೀರಿ. ದಯಮಾಡಿ ನೀವು ಯಡಿಯೂರಪ್ಪ ಕೆಳಗಿಳಿಸಲು ಸ್ಪಷ್ಟ ಕಾರಣ ಕೊಡಿ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ, ಬಿಜೆಪಿ ಮನೆಗೊಂದು ಸೈನಿಕರನ್ನು ಕೊಡುವ ಬದಲು, ಕೊರೊನಾ ಮೂಲಕ ಮನೆಗೊಂದು ಸಾವು ಕೊಟ್ರು. ಈಗ ಯಡಿಯೂರಪ್ಪ ಕೆಳಗಿಳಿಸಿ ಅಧಿಕಾರ ನಡೆಸುವ ದೊಂಬರಾಟವನ್ನು ಬಿಜೆಪಿ ಆಡುತ್ತಿದೆ. ಬಿಜೆಪಿಗೆ ನಾಚಿಕೆ ಆಗಬೇಕು. ಎಲ್ಲದಕ್ಕೂ ಕಾನೂನಲ್ಲಿ ಶಿಕ್ಷೆ ಇದೆ. ಜನಪೀಡಕ ಸರ್ಕಾರರ ವಿರುದ್ಧ ಜನತಾ ನ್ಯಾಯಾಯಾಲದಲ್ಲಿ ಶಿಕ್ಷೆ ಕೊಡಬೇಕು. ಇಂತಹ ಸರ್ಕಾರ ಬೇಗ ತೊಲಗಬೇಕು. ಯಡಿಯೂರಪ್ಪ ಕಣ್ಣೀರ ಶಾಪದಿಂದ ಶಾಶ್ವತ ವಾಗಿ ಬಿಜೆಪಿ ಸರ್ಕಾರ ತೊಲಗಬೇಕು.ಜನ ಒಂದು ನಿರೀಕ್ಷೆ ಜನ ಇಟ್ಟುಕೊಂಡಿದ್ದಾರೆ. ಎಲ್ಲೋ ಒಂದು ಕಡೆ ಯಡಿಯೂರಪ್ಪ ಭ್ರಷ್ಟಾಚಾರಕ್ಕೆ ಪೂರಕವಾದ ಕೆಲಸವನ್ನು ಬೊಮ್ಮಾಯಿ ಮಾಡ್ತಾರೆ ಅನಿಸುತ್ತಿದೆ ಎಂದು ಕಿಡಿಕಾರಿದರು.
ENGLISH SUMMARY….
Rs.30,000 cr. loot, Rs.2.20 lakh cr. loan is the only achievement of BJP:’ M. Lakshmana
Mysuru, July 30, 2021 (www.justkannada.in): KPCC spokesperson M. Lakshmana today alleged that the only achievement of BJP government is looting of Rs. 30,000 crore and getting Rs.2.20 lakh crore loans.
Addressing a press meet in Mysuru today he released a book titled, “Janapeedita Sarkaara.” On the occasion he alleged that the BJP government is getting 20% commission for all the tenders and is the most corrupt government the state has ever seen. “By bringing NEET exams you spoiled the dreams of common people in getting medical seats,” he said.
Keywords: M. Lakshmana/ KPCC Spokesperson/ BJP government/ loot/ loan/ most corrupt
key words: 30 lakh -crores BJP govt-kpcc- Spokesperson-M.Laxman