ಮೈಸೂರು ,ಮಾರ್ಚ್,5,2024(www.justkannada.in): ಜಾತಿಗಣತಿ ವರದಿ ಸ್ವೀಕಾರ ಮಾಡಿರುವ ರಾಜ್ಯ ಸರ್ಕಾರ, ಅದನ್ನು ಯಥಾವತ್ತಾಗಿ ಅಂಗೀಕರಿಸಬೇಕು ಎಂದು ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರಾದ ಮಾಜಿ ಮೇಯರ್ ಪುರುಷೋತ್ತಮ್, ಪ್ರೊ ಮಹೇಶ್ ಚಂದ್ರ ಗುರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿದ್ದ ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿರುವುದು ಸ್ವಾಗತಾರ್ಹ. ಜಾತಿಗಣತಿ ವರದಿಯ ಪ್ರಕಾರ ದಲಿತರು, ಹಿಂದುಳಿದವರ ಜನಸಂಖ್ಯೆ ಅತಿ ಹೆಚ್ಚಿದೆ. ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆಯಿದೆ. ಹಾಗಾಗಿ ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಬೇಕು. ದಲಿತರು, ಹಿಂದುಳಿದ ವರ್ಗಗಳಿಗೆ ನ್ಯಾಯೋಚಿತವಾಗಿ ಸಿಗಬೇಕಾಗಿರುವ ಎಲ್ಲಾ ಸವಲತ್ತುಗಳು ದೊರಕಿಸಿ ಕೊಡಬೇಕು.ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಾತಿಗಣತಿ ವರದಿ ವಸ್ತು ನಿಷ್ಟೆ ಹಾಗೂ ವೈಜ್ಞಾನಿಕ.
ಈ ವೇಳೆ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಸ್ವಾತಂತ್ಯ ಬಂದ ಮೇಲೆ ಸಂವಿಧಾನ ಬಂದಿದೆ. ದೇಶಕ್ಕೆ ಸ್ವಾತಂತ್ಯ ಬಂದ ಮೇಲೆ ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆ ತಿರಸ್ಕರಿಸಿದೆ. ಎಲ್ಲಾ ಪಕ್ಷಗಳು ಕೂಡ ಸಮಾನತೆ ತಿರಸ್ಕರಿಸಿವೆ. ಕಾಂತರಾಜ್ ಆಯೋಗದ ವರದಿ ವಸ್ತುನಿಷ್ಠೆ ಹಾಗೂ ವೈಜ್ಞಾನಿಕವಾಗಿದೆ. ಇದನ್ನು ಈ ವರದಿ ಸರ್ಕಾರಕ್ಕೆ ಮೊನ್ನೆ ಸಲ್ಲಿಸಿದ್ದಾರೆ. ಆದರೆ ಈ ವರದಿಗೆ ಕೆಲವರು ವಿರೋಧ ಮಾಡುತ್ತಿದ್ದಾರೆ ಇವರೆಲ್ಲ ಜಾತಿವಾದಿಗಳು ಎಂದು ಟೀಕಿಸಿದರು.
ಬಿಜೆಪಿ ಜೆಡಿಎಸ್ ಇಬ್ಬರು ಡೆಡ್ಲಿ ಕಾಂಬಿನೇಶನ್:
ಜಾತಿಗಣತಿ ವರದಿ ಅತ್ಯಂತ ವಸ್ತುನಿಷ್ಠೆಯಿಂದ ಕೂಡಿದೆ. ಬ್ರಾಹ್ಮಣ ಲಿಂಗಾಯತ ಒಕ್ಕಲಿಗರು ಎಲ್ಲವನ್ನೂ ಅನುಭವಿಸಿದ್ದಾರೆ. ಬಿಜೆಪಿ ಜೆಡಿಎಸ್ ಇಬ್ಬರು ಡೆಡ್ಲಿ ಕಾಂಬಿನೇಶನ್ . ಬಿಜೆಪಿ ಕೋಮುವಾದಿ ಪಕ್ಷ ಜೆಡಿಎಸ್ ಜಾತಿವಾದಿ ಪಕ್ಷ ಇವರಿಂದ ಸಾಮಾಜಿಕ ನ್ಯಾಯ ಸಿಗಲ್ಲ ಎಂದು ಪ್ರೊ. ಮಹೇಶ್ ಚಂದ್ರ ಗುರು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಯಾವ ಮುಲಾಜಿಲ್ಲದೆ ಕಾಂತರಾಜ್ ವರದಿಯನ್ನು ಸ್ವೀಕರಿಸಬೇಕು. ಯಾರ ವಿರೋಧಕ್ಕೆ ನೀವು ಹೆದರಬೇಡಿ. ನಿಮ್ಮ ಜೊತೆ ನಾವಿದ್ದೇವೆ. ನಾವು ಬಹುಸಂಖ್ಯಾತರು ಈಗಗಲೇ ನಮ್ಮ ಶಕ್ತಿಯನ್ನು ವಿಧಾನಸಭಾ ಚುನಾವಣೆಯಲ್ಲಿ ತೋರಿಸಿದ್ದೇವೆ. ಮುಂಬರುವ ಲೋಕಸಭೆಯಲ್ಲೂ ಅವರನ್ನು ಸೋಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಹೇಶ್ ಚಂದ್ರ ಗುರು ಬ್ಯಾಟಿಂಗ್ ನಡೆಸಿದರು.
Key words: Accept – Census report- properly- thinkers- urge –government-mysore