ಬೆಂಗಳೂರು,ಏಪ್ರಿಲ್,27,2021(www.justkannada.in): ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಇಂದು ರಾತ್ರಿಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಬಿಗಿ ಕ್ರಮಗಳನ್ನ ಸರ್ಕಾರ ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಪ್ರಮುಖ ನಗರಗಳಿಂದ ಜನರುತಮ್ಮ ಊರುಗಳತ್ತ ಮುಖ ಮಾಡಿದ್ದು ಬಸ್ ನಿಲ್ದಾಣಗಳು ಹೌಸ್ ಫುಲ್ ಆಗಿದೆ.
ಈ ಮಧ್ಯೆ ಸಂಚಾರಕ್ಕೆ ಹೆಚ್ಚುವರಿಯಾಗಿ 1500ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್ ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.
ಹಾಗೆಯೇ ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರು ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ. ಜನರು ಟಿಕೆಟ್ ತೋರಿಸಿ ಮನೆ ಸೇರಬಹುದು. ಪ್ರಯಾಣಿಕರು ಕೊರೋನಾ ನಿಯಮವನ್ನ ಪಾಲಿಸಬೇಕು ಎಂದು ಶಿವಯೋಗಿ ಕಳಸದ್ ಮನವಿ ಮಾಡಿದರು.
Key words: additional -1500 buses- No increase – ticket prices – KSRTC MD- shivayogi kalasad