ಮೈಸೂರು,ಮೇ,13,2021(www.justkannada.in): ಕೋವಿಡ್ ರೋಗಿಗಳಿಗೆ ಅನುಕೂಲವಾಗಲೆಂದು ಅಗರ್ವಾಲ್ ಸಮಾಜ ಮೈಸೂರು ಸಂಸ್ಥೆಯು ಮೈಸೂರು ಮಹಾನಗರ ಪಾಲಿಕೆಗೆ 1000 ಔಷಧಿ ಕಿಟ್ಗಳನ್ನು ಮತ್ತು ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ 500 ಔಷಧಿ ಕಿಟ್ಗಳನ್ನು ನೀಡಿದೆ.
ಅಗರ್ವಾಲ್ ಸಮಾಜ ಮೈಸೂರು ಸಂಸ್ಥೆಯ ಈ ಸಾಮಾಜಿಕ ಕಾಳಜಿಯ ಸೇವೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಮತ್ತು ಮಹಾನಗರ ಪಾಲಿಕೆಯ ಇತರ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಅಗರ್ವಾಲ್ ಸಮಾಜ ಮೈಸೂರು ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಮೈಸೂರು ಸುತ್ತುಮುತ್ತಲ ಪ್ರದೇಶಗಳಲ್ಲಿರುವ ಬಡವರಿಗೆ ಹಾಗೂ ಅಗತ್ಯವಿರುವ ಸಾರ್ವಜನಿಕರಿಗೆ ನಾನಾವಿಧದಲ್ಲಿ ಸಕಾಲಿಕ ಸಹಾಯಹಸ್ತ ಚಾಚುತ್ತಾ ಸಾಮಾಜಿಕ ಸೇವೆ ಮಾಡುವ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದೆ.
ಪ್ರಸ್ತುತ ಕೋವಿಡ್ -19 ರ ಸಾಂಕ್ರಾಮಿಕ ಬಿಕ್ಕಟ್ಟಿನ ವಿಷಮ ಪರಿಸ್ಥಿತಿಯಲ್ಲಿ ಬಡವ ಬಲ್ಲಿದನೆಂದಿಲ್ಲದೆ ಸ್ಮಶಾನದಲ್ಲಿ ಶವಸಂಸ್ಕಾರಕ್ಕಾಗಿ ಉರುವಲಿನ ಅಗತ್ಯಕ್ಕೆ ಸಕಾಲಿಕವಾಗಿ ಸ್ಪಂದಿಸಿದಲ್ಲದೆ, ಕಳೆದ ಹಲವಾರು ದಿನಗಳಿಂದ ಅದನ್ನು ನಿಯಮಿತವಾಗಿ ಪೂರೈಕೆ ಮಾಡುತ್ತಿದೆ. ವಿವಿಧ ಕೋವಿಡ್ -19 ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧದ ಅಗತ್ಯಕ್ಕೆ ಸ್ಪಂದಿಸಿದ ಅಗರ್ವಾಲ್ ಸಮಾಜ ಮೈಸೂರು ಸಂಸ್ಥೆಯ ಸದಸ್ಯರು ಸಾರ್ವಜನಿಕರಿಗೆ ಅಗತ್ಯವಾದ ವೈದ್ಯಕೀಯ ಕೊಡುಗೆಗಳನ್ನು ನೀಡಲು ಮುಂದಾಗಿರುವುದು ಬಹಳ ಸಂತಸದ ವಿಷಯವಾಗಿದೆ.
ಔಷಧಿ ಕಿಟ್ ವಿತರಣೆ ವೇಳೆ ಅಗರ್ವಾಲ್ ಸಮಾಜ ಮೈಸೂರು ಸಂಸ್ಥೆಯ ಅಧ್ಯಕ್ಷರಾದ ಡಾ. ಕೃಷ್ಣ ಮಿತ್ತಲ್, ಪದಾಧಿಕಾರಿಗಳಾದ ಶ್ರೀ ಆರ್. ಪರ್ವೀನ್ ಗೋಯಲ್, ಶ್ರೀ ಅರುಣ್ ಬಗಾಡಿಯಾ, ಶ್ರೀ ಅರುಣ್ ಜಲುಕಾ, ಶ್ರೀ ಶೋಭಿತ್ ಕೆಡಿಯಾ ಮತ್ತು ಶ್ರೀ ಕೇಶವ್ ಮಿತ್ತಲ್ ಮುಂತಾದ ಅಗರ್ವಾಲ್ ಸಮಾಜದ ಗಣ್ಯರು ಉಪಸ್ಥಿತರಿದ್ದರು.
Key words: Aggarwal Social Mysore- Organization-provides- medicine kits – benefit -covid patients.