ಬೆಂಗಳೂರು, ಮೇ 13, 2023 (www.justkannada.in): ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.
ಜಿಲ್ಲಾ ಕೇಂದ್ರಗಳ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯ ಆರಂಭಿಸಲಾಗಿದೆ. ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 7-45 ಕ್ಕೆ ಸರಿಯಾಗಿ ಏಜೆಂಟ್ ಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ.
ಸ್ಟ್ರಾಂಗ್ ರೂಂ ನಲ್ಲಿ ಇರುವ ಅಂಚೆ ಮತ ಹಾಗೂ ಇವಿಯಂ ಗಳನ್ನು ಟೇಬಲ್ ಗಳಿಗೆ ರವಾನೆ ಮಾಡಲಾಗುತ್ತಿದೆ. ಮೊದಲಿಗೆ ಅಂಚೆ ಮತ ಎಣಿಕೆ, ನಂತರ ಮನೆಮನೆ ಓಟಿಂಗ್ ಎಣಿಕೆ, ಬಳಿಕ ಇವಿಎಂ ಮತ ಎಣಿಕೆ ಆಗಲಿದೆ.