ಬಿಡಿಎ ನಿವೇಶನಗಳ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರಾ! 6ನೇ ಹಂತದ ಇ-ಹರಾಜು ಪ್ರಕ್ರಿಯೆ ಪೂರ್ಣ

ಬೆಂಗಳೂರು: ಬಿಡಿಎ ನಿವೇಶನಗಳಿಗೆ ಬಂಗಾರದ ಬೆಲೆ  ಬಂದಿದೆ. ಬಿಡಿಎ ನಿವೇಶನಗಳು ಭಾರೀ ಬೆಲೆಗೆ ಮಾರಾಟವಾಗಿವೆ.

ಸರ್.ಎಂ.ವಿ. ಬಡಾವಣೆ 3 ನೇ ಬ್ಲಾಕ್’ನಲ್ಲಿ ಪ್ರತಿ ಚ.ಮೀ.ಗೆ ಬಿಡಿಎ ನಿಗದಿಪಡಿಸಿದ ಬೆಲೆ ರೂ. 39,000 ಆದರೆ  ಪ್ರತಿ ಚ.ಮೀ.ಗೆ  ರೂ. 1,67,000 ದಾಖಲೆ ಬೆಲೆಗೆ ನಿವೇಶನ ಮಾರಾಟವಾಗಿವೆ.

ಆರನೇ ಹಂತದ ಇ ಹರಾಜು ಪ್ರಕ್ರಿಯೆಯಲ್ಲಿ  255.00 ಕೋಟಿ ರೂ. ಬಿಡಿಎ ಬೊಕ್ಕಸಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ 1614 ಬಿಡ್ಡುದಾರರು. ಶೀಘ್ರದಲ್ಲೇ ಏಳನೇ ಹಂತದ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.

6ನೇ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯ: ಬಿಡಿಎ ನಿವೇಶನಕ್ಕೆ ನಿರೀಕ್ಷೆಗೂ ಮೀರಿದ ಬೆಲೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರನೇ ಹಂತದ ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಬಿಡಿಎ ನಿರೀಕ್ಷೆಗೂ ಮೀರಿ ನಾಗರಿಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾರೆ. ವಿಶೇಷವಾಗಿ ಈ ಬಾರಿ ಕೆಲವೊಂದು ನಿವೇಶನಗಳಿಗೆ ನಿರೀಕ್ಷೆಗೂ ಮೀರಿದ ಬೆಲೆ ಬಂದಿರುತ್ತದೆ. ಹೆಚ್ಚಿನ ದರಕ್ಕೆ ಮಾರಾಟವಾದ ಕೆಲ ನಿವೇಶನಗಳ ವಿವರ ಇಂತಿದೆ:

 

ಕ್ರ. ಸಂ.   ಬಡಾವಣೆಯ ಹೆಸರು              ಪ್ರತಿ ಚ.ಮೀ.ಗೆ ಬಿಡಿಎ ನಿಗದಿಪಡಿಸಿದ ಬೆಲೆ            ಪ್ರತಿ ಚ.ಮೀ.ಗೆ ಮಾರಾಟವಾದ ಬೆಲೆ    ಬಿಡಿಎ ನಿಗದಿಪಡಿಸಿದ ಮೂಲ ಬೆಲೆ (ಒಟ್ಟು ಚ.ಮೀ.) ಹರಾಜಿನ ಬೆಲೆ (ಒಟ್ಟು ಚ.ಮೀ)              ಒಟ್ಟು ಶೇಕಡಾವಾರು

1              ಸರ್.ಎಂ.ವಿ. ಬಡಾವಣೆ 3ನೇ ಬ್ಲಾಕ್      39,000   1,67,000               30,42,000             1,30,26,000         328.21

2              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,20,000               61,23,600             1,74,96,000         185.71

3              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,20,000               54,43,200             1,55,52,000         185.71

4              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,10,500               45,61,200             1,20,00,300         163.1

5              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,09,000               22,68,000             58,86,000             159.52

6              ಅರ್ಕಾವತಿ ಬಡಾವಣೆ 3ನೇ ಬ್ಲಾಕ್ (ಸಂಪಿಗೆಹಳ್ಳಿ) 39,072   1,01,072               70,32,960             1,81,92,960         158.68

7              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,07,500               20,79,000             53,21,250             155.95

8              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,06,000               1,51,20,000         3,81,60,000         152.38

9              ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   1,04,000               22,68,000             56,16,000             147.62

10           ಮುಂದುವರೆದ ಸರ್.ಎಂ.ವಿ. ಬಡಾವಣೆ 8ನೇ ಬ್ಲಾಕ್             42,000   1,03,000               32,13,000             78,79,500             145.24

11           ಅರ್ಕಾವತಿ ಬಡಾವಣೆ 7ನೇ ಬ್ಲಾಕ್ (ಜಕ್ಕೂರು)      44,400   1,07,400               37,29,600             90,21,600             141.89

12           ಸರ್.ಎಂ.ವಿ. ಬಡಾವಣೆ 5ನೇ ಬ್ಲಾಕ್      42,000   99,500   23,43,600             55,52,100             136.9

13           ಬನಶಂಕರಿ ೬ನೇ ಹಂತ, 1ನೇ ಬ್ಲಾಕ್    48,750   1,12,750               1,03,10,625         2,38,46,625         131.28

ಈ ಬಾರಿ ಒಂದರಿಂದ ಐದನೇ ಹಂತದ ಇ-ಹರಾಜಿನಲ್ಲಿ ಹರಾಜು ಆಗದೆ ಬಾಕಿ ಉಳಿದಿದ್ದ 365 ನಿವೇಶನಗಳನ್ನೂ ಮರು ಹರಾಜಿಗೆ ಅಳವಡಿಸಲಾಗಿತ್ತು. ಹರಾಜಿಗೆ ಹಾಕಿದ್ದ ಒಟ್ಟು 429 ನಿವೇಶನಗಳಲ್ಲಿ 271 ನಿವೇಶನಗಳು ಮಾರಾಟವಾಗಿರುವುದು ಗಮನಾರ್ಹ. ಹರಾಜು ಪ್ರಕ್ರಿಯೆಯಲ್ಲಿ ಸುಮಾರು 1614 ಬಿಡ್ಡುದಾರರು ಭಾಗವಹಿಸಿದ್ದು, ಹರಾಜಿನಲ್ಲಿ ರೂ. 255.00 ಕೋಟಿ ಸಂದಾಯವಾಗಲಿದೆ.

 

ಈ ಸಂಬಂಧ ಪ್ರಮುಖ ಮಾಹಿತಿ ಇಂತಿದೆ:

ಆರನೇ ಹಂತದ ಹರಾಜು ಪ್ರಕ್ರಿಯೆ

ಒಟ್ಟು ನಿವೇಶನಗಳ ಸಂಖ್ಯೆ-429

ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು-271

ಹರಾಜಿನಿಂದ ಹಿಂಪಡೆದ ನಿವೇಶನಗಳ ಸಂಖ್ಯೆ-5

ಪ್ರತಿಕ್ರಿಯೆ ಬಾರದಿರುವುದು-128

ಶೇಕಡ 5 ಕ್ಕಿಂತ ಕಡಿಮೆ ಪ್ರತಿಕ್ರಿಯೆ ಬಂದಿರುವುದು-29

ಒಟ್ಟು ಮೂಲ ಬೆಲೆ-ರೂ.166.32 ಕೋಟಿ

ಒಟ್ಟು ಹರಾಜು ಮೌಲ್ಯ-ರೂ. 255.00 ಕೋಟಿ

ಗಳಿಕೆ-ರೂ. 88.28 ಕೋಟಿ

ಒಟ್ಟು ಬಿಡ್ಡುದಾರರು -1614

ಒಟ್ಟು ನಿವೇಶನಗಳ ಸಂಖ್ಯೆ-429

ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು-271

ಹರಾಜಿನಿಂದ ಹಿಂಪಡೆದ ನಿವೇಶನಗಳ ಸಂಖ್ಯೆ-5

ಏಳನೇ ಹಂತದ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು.