ನನ್ನ ವಿರುದ್ದ ಶತ್ರು ಭೈರವಿಯಾಗ, ಪಂಚಬಲಿ ಕೊಡುತ್ತಿದ್ದಾರೆ: ದೇವರು ನಮ್ಮನ್ನ ಕಾಪಾಡುತ್ತಾನೆ- ಡಿಸಿಎಂ ಡಿಕೆ ಶಿವಕುಮಾರ್.

ಬೆಂಗಳೂರು,ಮೇ,30,2024 (www.justkannada.in): ನನ್ನ ವಿರುದ್ದ ಶತ್ರು ಭೈರವಿಯಾಗ ನಡೆಯುತ್ತಿದೆ.  ಪಂಚಬಲಿ ಕೊಡುತ್ತಿದ್ದಾರೆ. ಆದರೆ ನಾವು ನಂಬಿದ ದೇವರು ನಮ್ಮನ್ನ ಕಾಪಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನನ್ನ ಸಿಎಂ ಸರ್ಕಾರ ವಿರುದ್ದ ಪೂಜೆ ನಡೆಯುತ್ತಿದೆ. ಕೇರಳದ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೆಯುತ್ತಿದೆ. ನನ್ನ ವಿರುದ್ದ ಶತ್ರು ಭೈರವಿಯಾಗ ನಡೆಯುತ್ತಿದೆ.  ಅಘೋರಿಗಳ ಮೂಲಕ ಈ ಯಾಗ ಮಾಡಿಸುತ್ತಿದ್ದಾರೆ  ಪಂಚ ಬಲಿ ಕೊಡುತ್ತಿದ್ದಾರೆ.  31 ಮೇಕೆ, 3 ಎಮ್ಮೆ,  21 ಕುರಿಗಳನ್ನ ಬಲಿ ಕೊಡುತಿದ್ದಾರೆ. ಅವರ ಪ್ರಯತ್ನ ನಡೆಯುತ್ತಾ ಇದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ನನ್ನ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ಯಾವ ಪೂಜೆ ಯಾರು ಮಾಡಿಸುತ್ತಿದ್ದಾರೆಂದು ಗೊತ್ತಿದೆ. ನಾವು ನಂಬಿರುವ ದೇವರು ನನ್ನಮ್ಮು ಕಾಪಾಡುತ್ತಾನೆ.  ನನಗೆ ಇಂತಹ ಪೂಜೆಗಳಲ್ಲಿ ನಂಬಿಕೆ ಇಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Key words: Bhairaviyaga- -against-me- DCM -DK Shivakumar