ಬೆಂಗಳೂರು, ಮಾರ್ಚ್ 15, 2021 (www.justkannada.in):
ತಮಿಳುನಾಡಿನ ಭವಾನಿದೇವಿ ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದಾರೆ.
ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಅಥ್ಲೀಟ್ ಆಗಿದ್ದಾರೆ.
ಬುಡಾಪೆಸ್ಟ್ ನಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ಸೇಬರ್ ವಿಶ್ವಕಪ್ ನಲ್ಲಿ ಅಧಿಕೃತ ಶ್ರೇಯಾಂಕದ ಆಧಾರದ ಮೇಲೆ ಭವಾನಿದೇವಿ ಮಹಿಳೆಯರ ವೈಯಕ್ತಿಕ ಸೇಬರ್ ನಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಈ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲನೇ ಫೆನ್ಸರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.