ಬೆಂಗಳೂರು,ಜೂನ್,4,2022(www.justkannada.in): ರಾಜ್ಯ ಸರಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲ ಪಡೆದಿರುವ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ (ಬಿಬಿಸಿ) ಮತ್ತು ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಪ್ಲಾಟ್ ಫಾರಂಸ್ (ಸಿ-ಕ್ಯಾಂಪ್), ಬಯೋ ಸ್ಪೆಕ್ಟ್ರಮ್ ವಾರ್ಷಿಕ ಸಮೀಕ್ಷೆಯಲ್ಲಿ ಸಾರ್ವಜನಿಕ ವಲಯ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ಐಟಿ- ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಶನಿವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಸರಕಾರದ ಕರ್ನಾಟಕ ಇನ್ನೋವೇಟೀವ್ ಟೆಕ್ನೊಲಾಜಿಕಲ್ ಸೊಸೈಟಿಯ (ಕಿಟ್ಸ್) ಬೆಂಬಲ ಹೊಂದಿರುವ ‘ಮಣಿಪಾಲ್ ಬಯೋ ಇನ್ಕ್ಯುಬೇಟರ್’ ಸಂಸ್ಥೆಯು ಖಾಸಗಿ ವಲಯದಡಿಯಲ್ಲಿ ಐದನೇ ಸ್ಥಾನ ಗಳಿಸಿದೆ’ ಎಂದು ತಿಳಿಸಿದ್ದಾರೆ.
ಬಿಬಿಸಿ ಮತ್ತು ಸಿ-ಕ್ಯಾಂಪ್ ಎರಡೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉಪಕ್ರಮಗಳಾಗಿದ್ದು, ಇವುಗಳಿಗೆ ಕಿಟ್ಸ್ ಮೂಲಕ ಬೆಂಬಲ ಒದಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವರ್ಷದ ರಾಷ್ಟ್ರೀಯ ಬಯೋಸ್ಪೆಕ್ಟ್ರಂ ಸಮೀಕ್ಷೆಯಲ್ಲಿ 40 ಇನ್ಕ್ಯುಬೇಟರುಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು. ರಾಜ್ಯದಲ್ಲಿ ನವೋದ್ಯಮಗಳಿಗೆ ಅಗತ್ಯವಾದ ಕಾರ್ಯ ಪರಿಸರವನ್ನು ಸೃಷ್ಟಿಸಲಾಗಿದೆ. ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಿಶೇಷವಾಗಿ, ಜೈವಿಕ ವಿಜ್ಞಾನ ಮತ್ತು ಆರೋಗ್ಯ ವಿಜ್ಞಾನ ಕ್ಷೇತ್ರಗಳಿಗೆ ಆದ್ಯ ಗಮನ ಹರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
Key words: Bio-Spectrum-Survey-Top-incubators
ENGLISH SUMMARY…
Karnataka’s Bio-Incubators bag top most ranks
Bengaluru: The two incubators supported by the Department of Electronics, IT, BT and S & T, GoK, have bagged the top most two rankings at the national level in the prestigious Biospectrum annual survey for bio incubators under the public sector category.
Dr.C.N.Ashwath Narayan, Minister for IT/BT and S&T, said on Saturday, that while the Bangalore Bioinnovation Centre (BBC) stood first, C-Camp (Centre for Cellular and Molecular Platforms) attained the second rank.
These two initiatives of the department of IT/BT are supported through the department’s nodal agency KITS (Karnataka Innovative Technological Society). In addition to this, The Manipal bio incubator, which is also incubated through KITS has secured the fifth ranking in the private sector category.
“This time 40 bio incubators across the country were included in the survey. The survey reflects the quality of services provided to startups, the IPs filed, investments brought, etc” Minister stated. Further, he opined, the top rankings achieved at the national level by the institutions led by the state government establish the fact that Karnataka had been the frontrunner in creating the ecosystem needed for startups, with a focus on bio and health sciences.