ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ವಾರ್ಡ್ ಮತ್ತು ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಆಳವಡಿಸುವಂತೆ ಆದೇಶ…

ಬೆಂಗಳೂರು,ಮೇ,8,2021(www.justkannada.in):  ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳ ವಾರ್ಡ್ ಮತ್ತು ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.jk

ಈ ಕುರಿತು ಆದೇಶಿಸಿರುವ ಆರೋಗ್ಯ ಇಲಾಖೆ, ಮೇ. 11ರ ಒಳಗೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳ ವಾರ್ಡ್ ಮತ್ತು ಐಸಿಯುಗಳಲ್ಲಿ ಸಿಸಿ ಟಿವಿ ಅಳವಡಿಸಿಕೊಳ್ಳು ಆಸ್ಪತ್ರೆಗಳ ನಿರ್ದೇಶಕರು, ವೈದ್ಯಕೀಯ ಮಹಾ ವಿದ್ಯಾಲಯ/ಜಿಲ್ಲಾ ಶಸ್ತ್ರಚಿಕಿತ್ಸಕರು/ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.cc-camera-all-district-taluk-hospital-wards-icus-state

ವಾರ್ಡ್, ಐಸಿಯು ಸೇರಿ ಸಿಸಿ ಟಿವಿ ಅಳವಡಿಸಿಕೊಳ್ಳು ತಗಲುವ ವೆಚ್ಚವನ್ನು ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಅಥವಾ ಆಸ್ಪತ್ರೆಯ ಲಭ್ಯವಿರುವ ಇತರೇ ಅನುದಾನದಿಂದ ಭರಿಸಿಕೊಳ್ಳುವಂತೆ  ಆರೋಗ್ಯ ಇಲಾಖೆ  ಸೂಚಿಸಿದೆ. ಹಾಗೆಯೇ ತೆಗೆದುಕೊಂಡ ಕ್ರಮದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿಗಳು  ಹಾಗೂ ಸದರಿ ಜಿಲ್ಲೆಗಳ ನೋಡಲ್ ಅಧಿಕಾರಿಗಳು ಪರಿಶೀಲಿಸಿ ಮೇ 12 ರೊಳಗೆ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ENGLISH SUMMARY….

Health Dept. issues orders to install CCTV cameras in all hospital wards and ICUs across the State
Bengaluru, May 8, 2021 (www.justkannada.in): The Health Department, Government of Karnataka has issued a circular directing all the hospitals in the District and Taluks to install CCTV cameras in all the wards and ICUs.cc-camera-all-district-taluk-hospital-wards-icus-state
The Department has asked the Directors, Medical Universities, District Health Officers, Medical Administrators to install CCTVs within May 11. The expenditure that is incurred to install the CCTVs should be borne under the Health Protection Committee funds or any other funds available in the hospital. The nodal officers are also instructed to check whether all the hospitals have installed CCTVs and report to the State Health Department by May 12.
Keywords: Health Department/ Govt. of Karnataka/ circular to install CCTVs/ in all the hospitals in all the districts and taluks/ May 11/ report by May 12

Key words: CC camera – all -district -taluk hospital- wards -ICUs – state.