ನವದೆಹಲಿ,ಫೆಬ್ರವರಿ,1,2024(www.justkannada.in): ದೇಶದಲ್ಲಿ ಭ್ರಷ್ಟಾಚಾರವನ್ನ ಮುಗಿಸಿದ್ದೇವೆ. ಸರ್ಕಾರದ ಗಮನವು ಜಿಡಿಪಿ ಮೇಲೆ ಇದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದರು.
ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 6ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿದ್ದು ಈ ವೇಳೆ ಮಾತನಾಡಿದ ಅವರು, ನಮ್ಮ ಯುವ ದೇಶವು ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿದೆ, ಅದರ ವರ್ತಮಾನದ ಬಗ್ಗೆ ಹೆಮ್ಮೆಯಿದೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಭರವಸೆ ಮತ್ತು ನಂಬಿಕೆಯನ್ನು ಹೊಂದಿದೆ. ನಮ್ಮ ಸರ್ಕಾರದ ಅತ್ಯುತ್ತಮ ಕೆಲಸದ ಆಧಾರದ ಮೇಲೆ ಜನರು ಮತ್ತೊಮ್ಮೆ ಬಲವಾದ ಜನಾದೇಶವನ್ನು ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ದೇಶದಲ್ಲಿ ನಾವು ಭ್ರಷ್ಟಾಚಾರವನ್ನ ಮುಗಿಸಿದ್ದೇವೆ. ಯುವಕರನ್ನ ಸದೃಢಗೊಳಿಸುವುದು ನಮ್ಮ ಧ್ಯೇಯ. ದೇಶಾದ್ಯಂತ 390 ವಿವಿ ಕೇಂದ್ರಗಳನ್ನ ಆರಂಭಿಸಿದ್ದೇವೆ. ಮುದ್ರಾ ಯೋಜನೆಯಡಿ 30 ಕೋಟಿ ಮುದ್ರಾ ಲೋನ್ ನೀಡಿದ್ದೇವೆ. ಒನ್ ನೇಷನ್ ಒನ್ ಮಾರ್ಕೆಟ್ ಜಾರಿ ಮಾಡಿದ್ದೇವೆ ಎಂದರು.
ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆ 10 ವರ್ಷಗಳಲ್ಲಿ 28 ಪ್ರತಿಶತದಷ್ಟು ಹೆಚ್ಚಾಗಿದೆ. ಫಸಲ್ ಬಿಮಾ ಯೋಜನೆಯಿಂದ ನಾಲ್ಕು ಕೋಟಿ ರೈತರಿಗೆ ಲಾಭವಾಗಿದೆ. ಬಡವರು, ಮಹಿಳೆಯರು ಮತ್ತು ಯುವಕರ ಕಡೆ ಗಮನ ಹರಿಸುವ ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ. 54 ಲಕ್ಷ ಯುವಕರಿಗೆ ತರಬೇತಿ ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಎಲ್ಲಾ ಮೂಲಭೂತ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿವೆ, ತೆರಿಗೆ ಸುಧಾರಣೆಗಳಿಂದ ತೆರಿಗೆ ವ್ಯಾಪ್ತಿ ಹೆಚ್ಚಿದೆ. ಜನರು ಮತ್ತೆ ನಮ್ಮನ್ನು ಆಶೀರ್ವಾದಿಸುತ್ತಾರೆಂದು ಭಾವಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: central budget- – finished -corruption -Union Minister- Nirmala Sitharaman.