ಮೈಸೂರು,ಆ,25,2020(www.justkannada.in): ‘ಕೋಲುಮಂಡೆ’ ಆಲ್ಬಂ ಹಾಡಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಹಿನ್ನೆಲೆ ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಇದೀಗ ಇತಿಹಾಸ ತಜ್ಞ ನಂಜರಾಜೇ ಅರಸ್ ಸಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ಕಿಡಿಕಾರಿರುವ ನಂಜರಾಜೇ ಅರಸ್, ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಅಯೋಗ್ಯ. ಮನೆಯಲ್ಲಿ ಗೌರಿ ಗಣೇಶನನ್ನ ಪೂಜಿಸುತ್ತೇವೆ. ಚಂದನ್ ಶೆಟ್ಟಿಗೆ ಕೇಳ್ತಿನಿ. ಗೌರಿ ಪೂಜೆಗೆ ಚಂದನ್ ಶೆಟ್ಟಿ ತನ್ನ ಗರ್ಲ್ ಫ್ರೇಂಡ್ ನ ಬಿಕಿನಿ ಹಾಕಿಸ್ಕೊಂಡು ಹೋಗ್ತಾನಾ ಎಂದು ಪ್ರಶ್ನಿಸಿದ್ದಾರೆ.
ಮಹದೇಶ್ವರ ಜನಪದ ಹಾಡುಗಳೆಂದರೇ ಅದರಲ್ಲಿ ನಮ್ಮ ಸಂಸ್ಕೃತಿ ಇದೆ. ಹುಡುಗಿಯರನ್ನ ಕೆಟ್ಟ ರೀತಿಯಲ್ಲಿ ಬಳಸಿಕೊಂಡು ಹಾಡಿನಲ್ಲಿ ಅಶ್ಲೀಲವಾಗಿ ಬಿಂಬಿಸುತ್ತಾನೆ. ನಮ್ಮ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಮಾಡಬಾರದು. ಹೊಸತನ ಕೋಡ್ತೀವಿ, ಇಂಗ್ಲೆಂಡ್ ನ ರೀತಿ ಮ್ಯೂಸಿಕ್ ಮಾಡ್ತೀವಿ ಅಂತಾರೆ. ಲವ್ ಗಿವ್ ಸಾಂಗ್ ಗಳನ್ನ ಅವರಿಷ್ಟ ಬಂದಂತೆ ಮಾಡಿಕೊಳ್ಳಲಿ. ಆದರೇ ನಮ್ಮ ಸಂಸ್ಕೃತಿಯನ್ನ ಸಾಯಿಸುವ ಕೆಲಸ ಆಗಬಾರದು ಎಂದು ನಂಜರಾಜೇ ಅರಸ್ ಹೇಳಿದರು.
ರ್ಯಾಪರ್ ಸಾಂಗ್ ಕೇಳೋದು ಹಿತವಿರಬಹುದು. ಸಾಂಸ್ಕೃತಿಕವಾಗಿ, ದೇವಿ ಹಿನ್ನಲೆ, ಪ್ರಭಾವಳಿಯನ್ನ ಇಟ್ಟುಕೊಂಡಿದ್ದೇವೆ. ನಮ್ಮ ಸಂಸ್ಕೃತಿಯ ತತ್ವಕ್ಕೆ ಅವಮಾನ ಮಾಡುವಂತ ಕೆಲಸ ಆಗಬಾರದು. ಕೂಡಲೇ ಆ ಸಾಂಗ್ ಹಿಂಪಡೆಯಬೇಕು ಎಂದು ಇತಿಹಾಸ ತಜ್ಞ ಪ್ರೋ. ನಂಜರಾಜೇ ಅರಸ್ ಆಗ್ರಹಿಸಿದರು.
Key words: Chandan Shetty – Awkward-Historian – Nanjaraje aras-mysore