ರಸಗೊಬ್ಬರ ಬಿತ್ತನೆ, ಬೀಜಕ್ಕೆ ಕೊರತೆಯಾಗಬಾರದು: ಪ್ರವಾಹ ಬಂದರೆ ಎದುರಿಸಲು ಸನ್ನದ್ಧರಾಗಿರಿ- ಸಿಎಂ ಸಿದ್ದರಾಮಯ್ಯ ಸೂಚನೆ.

ಬೆಂಗಳೂರು,ಮೇ,23,2024 (www.justkannada.in): ಹವಮಾನ ಇಲಾಖೆಯ ಪ್ರಕಾರ  ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚ ಮಳೆಯಾಗುತ್ತದೆ. ಹೀಗಾಗಿ ಪ್ರವಾಹ ಬಂದರೇ ಎದುರಿಸಲು ಸನ್ನದ್ಧರಾಗಿರಿ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಇಂದು ಗೃಹ ಕಚೇರಿ ಕೃಷ್ಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಡಿಸಿ ಮತ್ತು ಸಿಇಓಗಳ ಜೊತೆ ಚರ್ಚೆ ನಡೆಸಿ ಹಲವು ಸೂಚನೆಗಳನ್ನ ನೀಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹವಮಾನ ಇಲಾಖೆಯ ಪ್ರಕಾರ ವಾಡಿಕೆಗಿಂತ ಹೆಚ್ಚ ಮಳೆಯಾಗುತ್ತದೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ರಸಗೊಬ್ಬರಕ್ಕೆ ಕೊರತೆಯಾಗಬಾರದು.  ಬಿತ್ತನೆ ಬೀಜ ರಸಗೊಬ್ಬರ ಬೇಡಿಕೆಗಿಂತ ಹೆಚ್ಚು ದಾಸ್ತಾನು ಮಾಡಲಾಗಿದೆ.  ಇದಕ್ಕಾಗಿ ಜಿಲ್ಲಾಡಳಿತ ಕೃಷಿ ಇಲಾಖೆ ಸಿದ್ದವಾಗಿರಬೇಕು ಯಾವುದೇ ಕಾರಣಕ್ಕೂ ಕುಡಿಯುವ ನೀರು ಮೇವಿಗೆ ತೊಂದರೆಯಾಗಬಾರದು.  ಹವಮಾನ ಇಲಾಖೆ ಅಧಿಕಾರಿಗಳ ಜೊತೆ ನಿರಂತರ  ಸಂಪರ್ಕದಲ್ಲಿರುಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.

ಜನರ ಜೀವಕ್ಕೆ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳಲು ಸೂಚನೆ ಕೈಗೊಳ್ಳಬೇಕು. ಕೆಲವು ಕಡೆ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಪ್ರವಾಹ ಬಂದರೇ ಎದರುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿರಬೇಕು.  ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಹಾಗೆಯೇ ರಾಜ್ಯದ ಎಲ್ಲಾ ಕಡೆ ಕುಡಿಯುವ ನೀರಿನ ಟೆಸ್ಟ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: CM, Siddaramaiah, DC, CEO, Meeting