ಮಂಡ್ಯ, ಮಾರ್ಚ್,12,2021(www.justkannada.in): ನಮ್ಮ ದೇಶದ ಸ್ವಾತಂತ್ರ್ಯಸಂಗ್ರಾಮಕ್ಕೆ ಹಲವಾರು ಹೋರಾಟಗಾರರ ತ್ಯಾಗ ಬಲಿದಾನವಿದೆ, ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅವರನ್ನು ಸ್ಮರಿಸೋಣ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣಗೌಡರವರು ಹೇಳಿದರು.
ಮದ್ದೂರಿನ ಶಿವಪುರ ಸತ್ಯಾಗ್ರಹಸೌಧದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭವೂ ದೇಶದ 75 ಸ್ಥಳ, ನಗರಗಳಲ್ಲಿ ನಡೆಯುತ್ತಿದ್ದು. ಅದರಲ್ಲಿ ಮದ್ದೂರಿನ ಶಿವಪುರವೂ ಒಂದಾಗಿರುವುದು ಮಂಡ್ಯದವರಿಗೆ ಹೆಮ್ಮೆ ವಿಷಯ ಎಂದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ದೇಶವನ್ನು ಬಲಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಆಲೆಮನೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಗಾಣ ನಡೆಸುವವರಿಗೆ ಬ್ಯಾಂಕ್ ನಿಂದ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.
ಅಗ್ರಿ ಟೂರಿಸಂ ಮೂಲಕ ಕೃಷಿಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು….
ಅಗ್ರಿಟೂರಿಸಂ ಮೂಲಕ ಕೃಷಿಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮ ಹಿರಿಯರು ದೇಶದ ಹೋರಾಟದಲ್ಲಿ ಒಂದು ಶಕ್ತಿಯನ್ನು ತುಂಬಿದ್ದಾರೆ ಅವರ ಹೋರಾಟಕ್ಕೆ ಈ ದಿನ ಗೌರವ ಸಲ್ಲಿಸುವ ಕೆಲಸ ಈ ಸಂದರ್ಭದಲ್ಲಿ ನೇರವೇರಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಜಿಲ್ಲಾಧಿಕಾರಿಗಳಾದ ಎಸ್.ಅಶ್ವಥಿ ಅವರು ಮಾತನಾಡಿ, ಈ ದಿನ ಮಂಡ್ಯಕ್ಕೆ ಒಂದು ವಿಶೇಷ ದಿನ. ಕರ್ನಾಟಕದಲ್ಲಿ 3 ಜಿಲ್ಲೆಯನ್ನು ಅಮೃತ ಮಹೋತ್ಸವ ಕ್ಕೆ ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆ ವಿಚಾರ. ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಮಂಡ್ಯ ಶಿವಪುರದ ಧ್ವಜರೋಹಣ ಮತ್ತು ಧ್ವಜಸತ್ಯಾಗ್ರಹ ನೆನೆಯುವಂತದ್ದು. ಶಿವಪುರದ ಸತ್ಯಾಗ್ರಹದ ಆ ದಿನಗಳು ಇಂದು ಅನೇಕ ಯುವಕರಿಗೆ ಸ್ಪೂರ್ತಿ ಎಂದು ಅವರು ಹೇಳಿದರು.
ಇದಕ್ಕು ಮುನ್ನ ಸಚಿವ ನಾರಾಯಣಗೌಡ, ಪ್ರದರ್ಶನ ಮಳಿಗೆಗಳು, ಪುಸ್ತಕ ಪ್ರದರ್ಶನ, ಅಂಚೆಚೀಟಿ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀನಿವಾಸ್, ಡಿ.ಸಿ ತಮ್ಮಣ್ಣ, ಜಿ.ಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜಿ.ಪಂ ಸಿ.ಇ.ಒ ಜುಲ್ಪಿಕರ್ ಉಲ್ಲಾ, ಪಾಂಡವಪುರ ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Key words: commemorate – sacrifice – freedom- fighters-Minister -Narayana Gowda.