ಬೆಂಗಳೂರು,ಏಪ್ರಿಲ್,06,2021(www.justkannada.in) : ಎಂ.ಬಿ.ಪಾಟೀಲ್ ಅವರ ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ. ಈ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಅದರ ಮೇಲೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.
ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು ಎಲ್ಲವೂ ವೇದವಾಕ್ಯ ಅಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕುವ ಪಾಟೀಲರು ಮೊದಲು ಈಗ ನಡೆಯುವ ಮೂರು ಉಪಚುನಾವಣೆಗಳನ್ನು ಗೆದ್ದು ತೋರಿಸಲಿ ಎಂದರು
ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ
ಈ ಹಿಂದೆ ನಡೆದ 15 ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ. ವಾತಾವರಣ ನಮ್ಮ ಪರವಾಗಿದೆ. ಹೀಗಿರುವಾಗ ಹೊಸದಾಗಿ ಅಸೆಂಬ್ಲಿ ಚುನಾವಣೆ ಮಾಡುವುದು ಬೇಡ. ಈಗ ಮೂರು ಚುನಾವಣೆಗಳಲ್ಲಿ ಗೆದ್ದು ತೋರಿಸಲಿ ಎಂದಿದ್ದಾರೆ.
key words : criticism-answered-Not necessarily-Jagdish Shetter-sparkles-against-M.B.Patil