ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ನಾಡ ಹಬ್ಬಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಚಾಮುಂಡಿಬೆಟ್ಟ ಟೂರಿಸ್ಟ್ ಸ್ಪಾಟ್ ಆಗಿ ಬದಲಾಗುತ್ತಿದೆ. ಅದನ್ನು ಯಾತ್ರಾಸ್ಥಳವಾಗಿ ಉಳಿಸಬೇಕು. ಊರಿನಲ್ಲಿ ಸಿಗದೆ ಇರುವುದು ಇಲ್ಲಿ ಏನು ಸಿಗುತ್ತೆ. ಇಲ್ಲೇಕೆ ಅಂಗಡಿಗಳು ಬೇಕು. ಮೂಲ ಅಗತ್ಯಗಳಾದ ಊಟ, ಶೌಚಾಲಯ ಇದ್ದರೆ ಸಾಕು ಎಂದು ಸಲಹೆ ನೀಡಿದರು.
ಬೆಟ್ಟದ ಮೇಲೆ ಅಂಗಡಿ, ಕಾರು ನಿಲ್ಲಲು ಸ್ಥಳ ಮಾಡ್ತೀವಿ ಅಂತ ಸರ್ಕಾರ ಹೊರಟಾಗ ಮೈಸೂರಿನ ಪ್ರಜ್ಞಾವಂತರು ಅದನ್ನು ವಿರೋಧಿಸಿದರು. ಆದರೂ ಸರ್ಕಾರ ಜನರ ಮಾತು ಪರಿಗಣಿಸಲಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.