ನವದೆಹಲಿ.ಜು,4,2019(www.justkannada.in): ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022 ರ ವೇಳೆಗೆ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ವಿದ್ಯುತ್ ಸೌಲಭ್ಯ ಒದಗಿಸುವ ಗುರಿ ಹೊಂದಿದ್ದೇವೆ. 1.95 ಮನೆಗಳ ನಿರ್ಮಾಣಕ್ಕೆ ನಿರ್ಧಾರ ಮಾಡಲು ತೀರ್ಮಾನಿಸಿದ್ದೇವೆ. ಪ್ರತೀ ಮನೆಗೂ ಶೌಚಾಲಯಕ್ಕೆ ಒತ್ತು ನೀಡಲಾಗಿದ್ದು ಸ್ವಚ್ಛ ಭಾರತ್ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ’ ಯೋಜನೆಗೆ ಚಾಲನೆ ನೀಡಿಲಾಗಿದೆ., ವಿದ್ಯುತ್ ಮತ್ತು ಎಲ್ಪಿಜಿ ಸೌಲಭ್ಯ. ಪ್ರತೀ ಮನೆಗಳ ನಿರ್ಮಾಣ ಅವಧಿ 314 ದಿನದಿಂದ 114 ದಿನಕ್ಕೆ ಇಳಿಕೆ ಮಾಡಲಾಗಿದೆ ಮಾಧ್ಯಮಗಳಲ್ಲಿ ವಿದೇಶಿ ಹೂಡಿಕೆ ಬಗ್ಗೆ ಚಿಂತನೆ. ಗಾಂವ್,ಗರೀಬ್ ಮತ್ತು ಕಿಸಾನ್ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಸಣ್ಣ ಉದ್ಯೋಗಿಗಳಿಗೆ 59 ಸೆಕೆಂಡ್ಗಳಲ್ಲಿ ಸಾಲ ನೀಡುವ ವ್ಯವಸ್ಥೆ. ಪ್ರತಿಯೊಬ್ಬರಿಗೂ ಗೃಹ ನಿರ್ಮಾಣ .ವಿಮೆ ಕ್ಷೇತ್ರದಲ್ಲಿ ಶೇ. 100 ರಷ್ಟು FDI ಹೂಡಿಕೆಗೆ ಅನುಮತಿ ನೀಡಲಾಗುತ್ತದೆ ಎನ್ಆರ್ ಐಗಳ ಹೂಡಿಕೆ ಹೆಚ್ಚಿಸಲು ಎಫ್ ಪಿ ಐ ನೀತಿ ಏಕೀಕರಣ . ಎನ್ಆರ್ ಐ ಹೂಡಿಗೆಗಳು ಭಾರತದಲ್ಲಿ ಹೆಚ್ಚಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Key words: Electricity – Decision – build -1.95 crore –houses-budget