ಬೆಂಗಳೂರು,ಜೂನ್,6,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿಗೆ ಮುಂದಾಗಿದ್ದರೇ ಇತ್ತ ಬಿಜೆಪಿಯು ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರ ಮತ್ತು ಗ್ಯಾರಂಟಿ ಯೋಜನೆಗೆ ಷರತ್ತು ವಿಧಿಸಿರುವುದನ್ನ ವಿರೋಧಿಸಿ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಮಾಜಿ ಸಿಎಂ ಹೆಚ್.ಡಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರು ರಾಜ್ಯದಲ್ಲಿ ಧರಣಿ ಮಾಡುತ್ತಿದ್ದಾರೆ ಯಾವ ಕಾರಣಕ್ಕಾಗಿ ಧರಣಿ ಮಾಡುತ್ತಿದ್ದಾರೆ ವಿದ್ಯುತ್ ದರ ಹೆಚ್ಚಳಕ್ಕೆ ಅರ್ಜಿ ಹಾಕಿದ್ದು ನೀವೇ. ರಾಷ್ಟ್ರೀ ಪಕ್ಷಗಳ ನಡವಳಿಕೆಯನ್ನ ಜನರು ಗಮನಿಸಬೇಕು. ಎಲ್ಲದಕ್ಕೂ ಅರ್ಜಿ ಹಿಡಿದು ದೆಹಲಿಗೆ ಹೋಗಬೇಕು. 5 ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಮಾಡಲ್ಲ. ಗ್ಯಾರಂಟಿ ಕೊಟ್ಟಿದ್ದು ತಪ್ಪಲ್ಲ ಆದರೆ. ಆ ಭರವಸೆಯನ್ನು ಈಡೇರಿಸಬೇಕು ಎಂದು ಹೇಳಿದರು.
ಸ್ನೇಹಕ್ಕೂ ಸಿದ್ದ ಯುದ್ದಕ್ಕೂ ಸಿದ್ಧ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ ನಾವಿಲ್ಲಿ ಕುಳಿತಿರುವುದು ಸ್ನೇಹ ಮಾಡಲು ಅಲ್ಲ. ಅಗತ್ಯವಿದ್ದರೇ ಜನರಿಗಾಗಿ ಯುದ್ದ ಮಾಡಲು ಸಿದ್ಧ ಎಂದು ಟಾಂಗ್ ನೀಡಿದರು.
ವಿಪಕ್ಷಗಳು ಜನರನ್ನ ಎತ್ತುಕಟ್ಟುತ್ತಿವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಇದಕ್ಕೆ ವೇದಿಕೆ ಸಿದ್ದ ಮಾಡಿದ್ದೇ ನೀವು. ಗ್ಯಾರಂಟಿ ಯೋಜನೆಗೆ ಸಹಿ ಮಾಡಿಕೊಟ್ಟಿರಿ. ಗ್ಯಾರಂಟಿ ಯೋಜನೆ ಬಗ್ಗೆ ನಿಮಗೆ ಪರಿಜ್ಞಾನ ಇಲ್ಲವಾ ಈಗ ಗ್ಯಾರಂಟಿ ಬಗ್ಗೆ ಷರತ್ತು ಹಾಕುತ್ತಿದ್ದಾರಲ್ಲಾ ಬಾಡಿಗೆದಾರರ ಕಥೆ ಏನು..? ಎಂದು ಕಿಡಿಕಾರಿದರು.
Key words: Enforcement – guarantees – state-Former CM- HD kumaraswamy