ಬೆಂಗಳೂರು,ಡಿಸೆಂಬರ್,23,2023(www.justkannada.in): ರೈತರ ಸಾಲ ಮನ್ನಾಗೆ ಒಂದು ತಿಂಗಳ ಗಡುವು ನೀಡುತ್ತೇವೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ದೆಹಲಿ ಚಲೋ ನಡೆಸುತ್ತೇವೆ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ರೈತರ ಮಹಾ ಅಧಿವೇಶನವನ್ನ ನಗಾರಿ ಬಾರಿಸುವ ಮೂಲಕ ಪಂಜಾಬಿನ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ರೈತರು ದೇಶದ ಜನರ ಅನ್ನಕ್ಕಾಗಿ ಸಾಲ ಮಾಡಿದ್ದಾರೆ. ಹಣವನ್ನು ಭೂಮಿಗೆ ಹಾಕಿದ್ದಾರೆ. ಪ್ರಕೃತಿಯ ತೊಂದರೆಯಿಂದ ಸಾಲದ ಹಣ ವಾಪಸ್ ಬಂದಿಲ್ಲ. ಅದಕ್ಕೆ ರೈತರು ಹೊಣೆಯಲ್ಲ ಆದ್ದರಿಂದ ರೈತರ ಸಾಲ ಮನ್ನ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಒಂದು ತಿಂಗಳ ಗಡುವ ನೀಡುತ್ತೇವೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದ ರೈತರು ದೆಹಲಿ ಚಲೋ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬರಗಾಲದ ಭಿಕ್ಷೆ ನೀಡಲು ಸರ್ಕಾರ ಹೊರಟಿದೆ ರೈತರು ಸ್ವಾಭಿಮಾನಿಗಳು ಹಗುರವಾಗಿ ನಡೆದುಕೊಂಡರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ಪ್ರಧಾನಿಗಳಿಗೆ ಭರವಸೆ ನೀಡಿ ಒಂದು ವರ್ಷವಾದರೂ ಸಾಧ್ಯವಾಗಿಲ್ಲ. ರೈತರು ಹೆಸರಿನಲ್ಲಿ ರಾಜಕಾರಣ ಮಾಡುವುದು ದೇಶದ್ರೋಹದ ಕೆಲಸ ಎಂದು ಆಡಳಿತಗಾರರು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದರು.
Key words: Farmers -loan waiver- Delhi Chalo- Kuruburu Shanthakumar -warning