ಮೈಸೂರು,ಫೆಬ್ರವರಿ,25,2022(www.justkannada.in): ರಿಂಗ್ ರೋಡ್ ನಲ್ಲಿ ಕೆಲ ಮಹಾನ್ ನಾಯಕರು, ಬರ್ತ್ ಡೇ ಪಾರ್ಟಿಗಳ ಫ್ಲೆಕ್ಸ್ ಇದೆ. ಮೊದಲು ಅದನ್ನ ತೆಗೆಸಿ ಎಂದು ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.
ಇಂದು ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ ಸಂಸದ ಪ್ರತಾಪ್ ಸಿಂಹ, ಕಳೆದ ಎರಡು ವರ್ಷದಿಂದ ಈ ಫ್ಲೆಕ್ಸ್ ಭರಾಟೆ ಹೆಚ್ಚಾಗಿದೆ. ಯಾರೇ ಆಗಿದ್ದರೂ ನೋಟೀಸ್ ನೀಡಿ. ನಮ್ಮ ಪಾರ್ಟಿಯವರದ್ದು ಆಗಿದ್ದರೂ ಮೊದಲು ಅವರಿಗೆ ನೋಟೀಸ್ ನೀಡಿ.
ಅಣ್ಣ ಬೇಜಾರ್ ಮಾಡ್ಕೊತಾನೆ ಅಂತ ಕೆಲವರು ಪೋಟೊ ಹಾಕಿರ್ತಾರೆ. ದಯಮಾಡಿ ಆ ಅಣ್ಣನಿಗೆ ಮೊದಲು ನೋಟೀಸ್ ನೀಡಿ. ನಿಮ್ಮ ಸಹಕಾರ ಬೇಕು ಎಂದು ಜಿಲ್ಲಾಧಿಕಾರಿಗಳು. ಪಾಲಿಕೆ ಆಯುಕ್ತರಲ್ಲಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.
Key words: Flex – Ring Road-mysore-Pratap simha.