ಬೆಂಗಳೂರು,ಸೆಪ್ಟಂಬರ್, 9,2021(www.justkannada.in): ಕೊರೊನಾ 3ನೇ ಅಲೆ ಭೀತಿ ನಡುವೆ ನಾಡಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸರಳ ಹಾಗೂ ಸುರಕ್ಷಿತವಾಗಿ ಹಬ್ಬ ಆಚರಿಸಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಹಬ್ಬದ ಸಡಗರ ಹೆಚ್ಚಾಗಿದ್ದು ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿದ್ದು, ಜನರಿಗೆ ಹೂವು, ಹಣ್ಣುಗಳ ಏರಿಕೆಯ ಬಿಸಿ ತಟ್ಟಿದೆ.
ಪೆಟ್ರೋಲ್ , ಡೀಸೆಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಇದೀಗ ಹಬ್ಬದ ಸಂಭ್ರಮದಲ್ಲಿ ಹೂ ಹಣ್ಣುಗಳ ಬೆಲೆ ಏರಿಕೆಯು ಶಾಕ್ ನೀಡಿದೆ . ಹೌದು ಹೂವುಗಳ ಬೆಲೆ ನೋಡುವುದಾದರೆ ಒಂದು ಕೆಜಿ ಕನಕಾಂಬರ 2 ಸಾವಿರ ರೂ, ಮಲ್ಲಿಗೆ 1 ಸಾವಿರದಿಂದ 1,200 ರೂ, ಮಳ್ಳೆ ಹೂ 600 ರಿಂದ 800 ರೂ, ಕಾಕಡ 400 ರಿಂದ 600 ರೂ. ಸುಗಂಧ ರಾಜ 350 ರಿಂದ 400 ರೂ ಆಗಿದೆ. ಒಂದು ಕೆಜಿ ಗುಲಾಬಿಗೆ 300 ರೂ, ಸೇವಂತಿಗೆ ಒಂದು ಮಾರಿಗೆ 130 ರೂ.ಚೆಂಡು ಹೂವು ಒಂದು ಮಾರಿಗೆ 50 ರೂ ಆಗಿದೆ.
ಇನ್ನು ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಒಂದು ಕೆಜಿ ಸೇಬಿನ ಬೆಲೆ 120 ರಿಂದ 140 ರೂ, ದಾಳಿಂಬೆ 130 ರಿಂದ 150 ರೂ, ಮೂಸಂಬಿ 40 ರೂ ಒಂದು ಕೆ.ಜಿ ಬಾಳೆಹಣ್ಣು 80 ರೂ, ಕಿತ್ತಳೆ ಹಣ್ಣು ಕೆಜಿಗೆ 80 ರೂ, ಸಪೋಟ 50 ರೂ, ದ್ರಾಕ್ಷಿ 150 ರಿಂದ 180 ರೂ ಆಗಿದೆ ಎನ್ನಲಾಗಿದೆ.
ಹಾಗೆಯೇ ಒಂದು ಕಟ್ಟು ವೀಳ್ಯದೆಲೆ 80 ರಿಂದ 100 ರೂ, ಒಂದು ಜತೆ ಬಾಳೆ ಕಂದು 40 ರಿಂದ 60 ರೂ, ಒಂದು ಕಟ್ಟು ಗರಿಕೆಗೆ 30 ರೂ ಇದೆ.
ENGLISH SUMMARY….
Prices of flowers, fruits skyrocket on the occasion of Gowri-Ganesha festival
Bengaluru, September 9, 2021 (www.justkannada.in): The Gowri-Ganesha festival fervor has gripped the state amidst the fear of COVID-19 Pandemic third wave. However, the State Government has permitted to celebrate the festival in a simple and safe way. As a result of all the markets across Bengaluru city witnessed a huge rush. People were found busy purchasing essential commodities. In the meanwhile, the prices of fruits and flowers have skyrocketed.
The people are already facing the brunt due to the steep hike in the prices of fuel. Today the prices of fruits, flowers, and vegetables were double than what it was in the last week. However, the enthusiasm among the people in celebrating the festival has not diminished.
Keywords: Gowri-Ganesha festival/ prices/ skyrocket/ fruits/ flowers
Key words: Gauri Ganesh –festival- Flower – fruit -prices –hike