ಬೆಂಗಳೂರು, ಆಗಸ್ಟ್, 20, 2020(www.justkannada.in): ಕೊರೋನಾ ನಡುವೆಯೂ ಮನೆ ಮನೆಗಳಲ್ಲೇ ಗೌರಿ,ಗಣೇಶ ಹಬ್ಬ ಸಂಭ್ರಮಾಚರಣೆಗೆ ಜನರು ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಹೂ,ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.
ಈ ನಡುವೆ ಹೂ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಪರದಾಡುವಂತ್ತಾಗಿದೆ. ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಇಂದು ಹೂ ಹಣ್ಣು ಖರೀದಿಗೆ ಮುಂಜಾನೆಯಿಂದಲೇ ಜನರ ದಂಡು ತುಂಬಿತ್ತು. ಹೂ, ಹಣ್ಣುಗಳ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ.
ಗಗನಕ್ಕೇರಿದ ಹೂ, ಹಣ್ಣಿನ ಬೆಲೆ : ಒಂದು ಮೊಳ ಹೂವಿಗೆ 40 ರೂ, ಮಲ್ಲಿಗೆ ಹೂ 500-600 ರೂ, ಸೇವಂತಿಗೆ 250-300 ರೂ, ಗುಲಾಬಿ 250-300, ಮೂಸಂಬಿ 70-80, ಸೀಬೆ 60 ರೂ, ದಾಳಿಂಬೆ 180-200 ರೂ, ಸೇಬು 200 ರೂ, ಹೀಗೆ ಹೂ,ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
Key words : Gauri- Ganesha-Festival-Flower-Fruit-Price