ಬೆಂಗಳೂರು, ಜೂನ್ 09, 2020 (www.justkannada.in): ಸೈಫ್ ಹಾಗೂ ಕರೀನಾ ಕಪೂರ್ ನಿನ್ನೆ ಮಗ ತೈಮೂರ್ ಜೊತೆ ಮರೀನ್ ಡ್ರೈವ್ಗೆ ಬಂದಿದ್ದರು. ಈ ಫೋಟೋ ಟ್ರೋಲಿಗರ ಕೈಗೆ ಆಹಾರವಾಗಿದೆ.
ಸೈಫ್, ಕರೀನಾ ಮನೆಯಿಂದ ಹೊರಗಡೆ ಬಂದ ವೇಳೆ ಅಲ್ಲೇ ಇದ್ದ ಪೊಲೀಸರು ಅವರಿಗೆ ಮಗುವನ್ನು ಹೊರಗಡೆ ಕರೆದುಕೊಂಡು ಬರಬಾರದು ಎಂದು ಬುದ್ಧಿ ಹೇಳಿದ್ದಾರಂತೆ. ಈ ಸುದ್ದಿ ಹರಿದಾಡುತ್ತಿದೆ.
ಇದರಿಂದಾಗಿ ನೆಟ್ಟಿಗರು ಈ ಸೆಲೆಬ್ರಿಟಿ ಜೋಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸೆಲೆಬ್ರಿಟಿಗಳಾದರೆ ಅವರಿಗೆ ಕಾನೂನು ಹಾಗೂ ನಿಯಮಗಳು ಅನ್ವಯಿಸುವುದಿಲ್ಲವೇ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ.
ಜತೆಗೆ ಸೈಫ್ ಹಾಗೂ ಕರೀನಾ ಈ ವಿಡಿಯೋದಲ್ಲಿ ಮಾಸ್ಕ್ ತೊಟ್ಟಿದ್ದಾರೆ. ಆದರೆ ಮಗ ತೈಮೂರ್ಗೆ ಮಾಸ್ಕ್ ಇಲ್ಲ. ಅಲ್ಲದೆ ಮತ್ತಷ್ಟು ಫೋಟೋಗಳಲ್ಲಿ ತೈಮೂರ್ ಹಾಗೂ ಸೈಫ್ ಸಹ ಮಾಸ್ಕ್ ಇಲ್ಲದೆ ಕಾಣಿಸಿಕೊಂಡಿದ್ದಾರೆ.