ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆ: ಸರ್ಕಾರ ರಚನೆ ಮತ್ತು ಮುಂದಿನ ಸಿಎಂ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…

ಮೈಸೂರು,ಜು,6,2019(www.justkannada.in):  ಮೈತ್ರಿ ಸರ್ಕಾರದ ವಿರುದ್ದ ಅತೃಪ್ತ ಶಾಸಕರು ರಾಜೀನಾಮೆ ಹಿನ್ನೆಲೆ, ಸರ್ಕಾರ ರಚನೆಗೆ ನಾವು ಜವಾಬ್ದಾರಿಯುತವಾಗಿ ಕೆಲಸ ಮಾಡ್ತಿವಿ. ರಾಜ್ಯದಲ್ಲಿ  ಬಿಜೆಪಿಯಿಂದ ಮುಖ್ಯಮಂತ್ರಿಯಾದರೇ ಅದು ನೂರಕ್ಕೆ ನೂರು ಯಡಿಯೂರಪ್ಪ ಅವರೇ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕೇಂದ್ರ ಸಚಿವ ಸದಾನಂದಗೌಡ, ಸ್ವೀಕರ್ ಕಚೇರಿಗೆ ಬಂದವರನ್ನ‌ ನೋಡಿ ಆಶ್ವರ್ಯ ಆಗಿದೆ. ದಿಢೀರ್ ಬೆಳವಣಿಗೆ ಆಶ್ಚರ್ಯ ತಂದಿದೆ. ಸರ್ಕಾರ ಹಿಂದೆಯೇ ಬೀಳಬೇಕಿತ್ತು. ಮೈತ್ರಿಯಲ್ಲಿ ಅತೃಪ್ತರು ಹೆಚ್ಚು ಇರುವುದು ಇಲ್ಲಿ ಸ್ಪಷ್ಟವಾಗಿ ಕಾಣ್ತಿದೆ. ರಾಜೀನಾಮೆ ಸ್ಟೈಲ್ ನೋಡಿದ್ರೆ ಕಾಂಗ್ರೆಸ್ ದೊಡ್ಡ ಮಟ್ಟದ ವಿಭಜನೆ ಆಗೋದಿದೆ. ಎಷ್ಟು ಅತೃಪ್ತಿ ಇತ್ತು ಅನ್ನೋದು ರಾಜೀನಾಮೆ ಕೊಟ್ಟವರ ಭಾವನೆಯಿಂದ ಅರ್ಥ ಆಗುತ್ತೆ. ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ರಾಜ್ಯ ಕಾಂಗ್ರೆಸ್ ಗೂ ಇದು ಪಾಠ ಎಂದು ಚಾಟಿ ಬೀಸಿದರು.

ರಾಜ್ಯದಲ್ಲಿ ಬಿಜೆಪಿ ಆಪರೇಷನ್ ನಲ್ಲಿ ಭಾಗಿಯಾಗಿಲ್ಲ. ಕೇಂದ್ರದ ನಾಯಕರ ಈಗಾಗಲೇ ತಿಳಿಸಿದ್ದರು.  ನಾವು ಆಪರೇಷನ್ ನಲ್ಲಿ ಭಾಗಿಯಾಗೊಲ್ಲ. ನಾವು ಆಪರೇಷನ್ ಕಮಲ ಮಾಡಿಲ್ಲ ಎಂದು ಡಿವಿ ಸದಾನಂದಗೌಡ ಸ್ಪಷ್ಟನೆ ನೀಡಿದರು.

ಹಾಗೆಯೇ ನಮ್ಮ ರಾಜ್ಯದಲ್ಲಿ  ಬಿಜೆಪಿಯಿಂದ ಮುಖ್ಯಮಂತ್ರಿಯಾದರೇ  ಅದು ನೂರಕ್ಕೆ ನೂರು ಯಡಿಯೂರಪ್ಪ ಅವರೇ. ಅವರ ಬಿಟ್ಟು ಬೇರೆ ಯಾರು ಆಗುವುದಿಲ್ಲ. ರಾಜ್ಯ ಪಾಲರು ಸರ್ಕಾರ ರಚನೆಗೆ ಸೂಚಿಸಿದ ಕ್ಷಣವೇ ನಾವು ಸಿದ್ದತೆಯಲ್ಲಿ ತೊಡಗುತ್ತೇವೆ ಎಂದು ಡಿ.ವಿ ಸದಾನಂದಗೌಡರು ತಿಳಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಒಮ್ಮೆ ಮಾತ್ರ ಬಿಜೆಪಿ ಸರ್ಕಾರ ರಚನೆಗೆ ಯತ್ನಿಸಿದ್ದು ನಿಜ. ಆದರೆ ರಾಜ್ಯ ರಾಜಕೀಯದಲ್ಲಿ ಇದೀಗ ನಡೆದಿರುವ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ. ಕಾಂಗ್ರೆಸ್ ಜೆಡಿಎಸ್ ನ ಅತೃಪ್ತ ಶಾಸಕರ ರಾಜಿನಾಮೆ ವಿಚಾರದರಲ್ಲಿ ಬಿಜೆಪಿಯ ಕೈವಾಡವಿಲ್ಲ. ಎರಡೂ ಪಕ್ಷಗಳ ಶಾಸಕರು ಅತೃಪ್ತಿಯಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟನೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಅಧಿಕಾರ ಒಂದು ಮಾನದಂಡ, ಆದರೆ ಅಧಿಕಾರವೇ ಪ್ರಮುಖವಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ, ಇಲ್ಲದೇ ಇದ್ದಾಗಲೂ ತನ್ನ ತತ್ವ ಸಿದ್ಧಾಂತಗಳನ್ನು ಬಿಟ್ಟಿಲ್ಲ. ಬಿಜೆಪಿ ಇದೀಗ 12ಕೋಟಿ ಸದಸ್ಯರನ್ನು ಹೊಂದಿದೆ. ಪಕ್ಷದ ವಿಚಾರಧಾರೆಯನ್ನು ದೇಶಾದ್ಯಂತ ಜನ ಸಾಮಾನ್ಯರಿಗೆ ತಿಳಿಸುವ ಸಲುವಾಗಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಸದಸ್ಯರ ಸಂಖ್ಯೆ ಹೆಚ್ಚಾದಷ್ಟೂ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಬಿಜೆಪಿ ಪರವಾದ ಅಲೆ ಬೀಸಿತು. ಹಾಗಾಗಿ ಮೈಸೂರಿನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲು ನನ್ನನ್ನು ನೇಮಿಸಿದೆ.  ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ಸಂವಿಧಾನಬದ್ದವಾಗಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಜೆಪಿ ಬದ್ದವಾಗಿರಲಿದೆ. ಸಿದ್ದರಾಮಯ್ಯನವರ ಪರಮಾಪ್ತ ಶಾಸಕರೇ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾವು ಹೆಚ್ಚಿನ ವಿಶ್ಲೇಷಣೆ ಮಾಡುವುದಿಲ್ಲ ಎಂದು  ಡಿ.ವಿ ಸದಾನಂದಗೌಡ ಹೇಳಿದರು.

Key words: government- formation-bs yeddyurappa-CM-Central minister-dv sadanandagowda