ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆ:  ಸಿಲಿಕಾನ್ ಸಿಟಿಗೆ ತಂಪೆರೆದ ವರುಣ.

ಬೆಂಗಳೂರು, ಮೇ, 3,2024 (www.justkannada.in) ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣ ತಂಪೆರೆದಿದ್ದು ನಗರದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಗರದ ಹಲವೆಡೆ ನಿನ್ನೆ ಜೋರು ಮಳೆ ಆಗಿತ್ತು. ಇಂದು ಕೂಡ ನಗರದೆಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಇದೀಗ ಗುಡುಗು, ಮಿಂಚಿ ಸಹಿತ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್ ರೇಸ್ ಕೋರ್ಸ್,  ಶಿವಾನಂದ ಸರ್ಕಲ್,  ಚಾಲುಕ್ಯ ಸರ್ಕಲ್ , ಮೈಸೂರು ಬ್ಯಾಂಕ್ ವೃತ್ತ, ಮಾರ್ಕೆಟ್,  ಕೆಆರ್ ಪುರಂ,  ವೈಟ್ ಫಿಲ್ಡ್, ರಿಚ್ ಮಂಡ್ ಟೌನ್  ಸೇರಿ ಹಲವಡೆ ಮಳೆಯಾಗಿದೆ.

ಮೇ ತಿಂಗಳ ಮೊದಲ ವಾರದಲ್ಲೇ ಮಳೆ ಮಳೆರಾಯ ಆಗಮಿಸಿದ್ದ, ಕಳೆ ಅರ್ಧ ಗಂಟೆಯಿಂದಲೂ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸೂಚನೆ ಸಿಕ್ಕಿದೆ. ಬಿರು ಬಿಸಿಲಿಗೆ ಬೆಂದು ಹೋಗಿದ್ದ ಬೆಂಗಳೂರಿಗೆ ಮಳೆರಾಯ ಎಂಟ್ರಿಕೊಟ್ಟಿದ್ದು ಕೊಂಚ ನಿರಾಳವಾಗಿದೆ.

Key words: Heavy, rains, Bengaluru