ತುಮಕೂರು,ಜನವರಿ,6,2025 (www.justkannada.in): ಅತಿ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಂಬದಹಳ್ಳಿ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಬಸಣ್ಣನವರ ಮಗ ಪ್ರವೀಣ್ (23) ಹಾಗೂ ರಂಗನಾಥನವರ ಮಗ ಹರ್ಷೀತ್ (22) ಮೃತಪಟ್ಟವರು. ಗೋವಾಕ್ಕೆ ಹೋಗಿ ಬರುವಾಗ ಕಂಬದಹಳ್ಳಿ ಗ್ರಾಮದ ಆನಂದ್ ಎಂಬುವರಿಗೆ ಸೇರಿದ ಲಾರಿಗೆ ಡಿಕ್ಕಿ ಸಂಭವಿಸಿದೆ.
ಮೂವರು ಸ್ನೇಹಿತರು ಗೋವಾಕ್ಕೆ ಹೋಗಿದ್ದರು. ಈ ಮೂವರ ಪೈಕಿ ಹರ್ಷಾ ಎಂಬುವರು ತುಮಕೂರು ಜಿಲ್ಲೆಯ ಶಿರಾದಲ್ಲಿ ಇಳಿದಿದ್ದಾರೆ. ಈಗ ನಿದ್ದೆ ಬರುತಿದೆ ನಾವು ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಊರಿಗೆ ಹೋಗೋಣ ಎಂದು ಹೇಳಿದರೂ ಕೇಳದೆ ಈ ಇಬ್ಬರು ಅಲ್ಲಿಂದ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.
ಮಧುಗಿರಿ ಕಡೆಯಿಂದ ಇಟಿಎಸ್ ಕಾರು ಬೆಳಗಿನ ಜಾವ ಸುಮಾರು 3-30 ರ ಸಮಯದಲ್ಲಿ ಬಂದಿದೆ. ಅದೇ ಸಮಯದಲ್ಲಿ ಕಂಬದಹಳ್ಳಿಯ ಬಳಿ ಲಾರಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಅಪಘಾತ ಸಂಭವಿಸಿದ ಸ್ಥಳದಲ್ಲೆ ಹರ್ಷೀತ್ ಸಾವನ್ನಪ್ಪಿದ್ದಾರೆ. ಇನ್ನೂ ಉಸಿರಾಡುತಿದ್ದ ಪ್ರವೀಣ್ ಗೆ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಭೆಳಧರ ಗ್ರಾಮದ ಬಳಿ ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗಿದೆ. ಲಾರಿ ಹಾಗೂ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Two youths, die, horrific, accident