ಮನೆಯ ಮೇಲ್ಚಾವಣಿ ಕುಸಿದು ಅಕ್ಕ ತಮ್ಮ ಇಬ್ಬರು ಸಾವು.

ಬಾಗಲಕೋಟೆ,ಮೇ,31,2024 (www.justkannada.in): ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು  ಬಿದ್ದು ಅಕ್ಕ ಮತ್ತು ತಮ್ಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್​ ತಾಲ್ಲೂಕಿನ ಕಂದಗಲ್ಲ ಗ್ರಾಮದಲ್ಲಿ ನಡೆದಿದೆ.

ಗೀತಾ ಈಶ್ವರಯ್ಯ ಆದಾಪುರಮಠ(14) ಆಕೆಯ ಸಹೋದರ ರುದ್ರಯ್ಯ(10) ಮೃತಪಟ್ಟವರು. ಗೀತಾ ಹಾಗೂ ರುದ್ರಯ್ಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಇಂದು ಶಾಲೆ ಆರಂಭವಾಗಿದ್ದು ಶಾಲೆಗೆ ತೆರಳುವಂತೆ ಪೋಷಕರು ಸೂಚಿಸಿದ್ದರು. ಆದರೆ ಮೊದಲ ದಿನವಾದ್ದರಿಂದ ಅಕ್ಕ-ತಮ್ಮ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದರು.

ಗೀತಾ ಹಾಗೂ ಆಕೆಯ ಸಹೋದರ ಮೊಬೈಲ್​ ಬಳಸುತ್ತಾ ಮನೆಯೊಳಗೆ ಕುಳಿತಿದ್ದರು. ಈ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮಣ್ಣಿನಡಿ ಸಿಲುಕಿದ್ದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ.

Key words: house, roof, collapsed, two, died