ಈ ಬಾರಿ ಇಂಡಿಯಾ ಮೈತ್ರಿಕೂಟ 295 ಕ್ಷೇತ್ರ ಗೆಲ್ಲುತ್ತೆ- ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ.

ನವದೆಹಲಿ,ಜೂನ್,1,2024 (www.justkannada.in): ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 295 ಕ್ಷೇತ್ರಗಳನ್ನ ಗೆಲ್ಲುತ್ತದೆ ಎಂದು ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಮೈತ್ರಿ ಕೂಟದ ನಾಯಕರು ಎರಡುವರೆ ಗಂಟೆ ಚರ್ಚಿಸಿದ್ದೇವೆ. ಸಭೆಯಲ್ಲಿ ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಿದ್ದೇವೆ. ಇಂಡಿಯಾ ಮೈತ್ರಿಕೂಟ 295 ಕ್ಷೇತ್ರ ಗೆಲ್ಲುತ್ತೆ  ಎಂದರು.

ಜನರು ಮಾಡಿರುವ ಸರ್ವೇ ಜನರು ನಮಗೆ ಮಾಹಿತಿ ನೀಡಿದ್ದಾರೆ . ಆಡಳಿತದಲ್ಲಿರುವ ಸರ್ಕಾರಗಳು ಸರ್ವೆ ಮಾಡಿಸುತ್ತವೆ. ಆದರೆ ನಮ್ಮದು ಸತ್ಯದ ಸರ್ವೇ. ನಾವೇ 295 ಕ್ಷೇತ್ರ ಗೆಲ್ಲುತ್ತೇವೆ ಎಂದರು.

Key words: India, Alliance, win, 295 constituencies, Mallikarjuna Kharge.