ಮೈಸೂರು, ಜುಲೈ 07, 2023 (www.justkannada.in): ಜೆಎಸ್ಎಸ್ವೈದ್ಯಕೀಯ ಮಹಾವಿದ್ಯಾಲಯ, ಜೆಎಸ್ಎಸ್ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ನಡುವೆ ಏಷ್ಯನ್ ವೈದ್ಯಕೀಯ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮವನ್ನು (AMSEP) ಆಯೋಜಿಸುತ್ತಿದೆ.
ಈ ಕಾರ್ಯಕ್ರಮದಡಿ Tzu Chiವಿಶ್ವವಿದ್ಯಾಲಯದ 10 ವಿದ್ಯಾರ್ಥಿಗಳು ಮತ್ತು AMSEP ರಾಷ್ಟ್ರೀಯ ಮಂಡಳಿಯ 3 ವಿದ್ಯಾರ್ಥಿಗಳು ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯವನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅವುಗಳಲ್ಲಿ ಪ್ರಮುಖ ಚಟುವಟಿಕೆಗಳೆಂದರೆ- ಜೆಎಸ್ಎಸ್ ಆಸ್ಪತ್ರೆ, ಸ್ಕಿಲ್ ಲ್ಯಾಬ್, ಅನ್ಯಾಟಮಿ ಮ್ಯೂಸಿಯಂ, ಮತ್ತುಅರ್ಬನ್ ಹೆಲ್ತ್ ಸೆಂಟರ್ಗ’ಳಿಗೆ ಭೇಟಿ, ಫೊರೆನ್ಸಿಕ್ ಕ್ಲಬ್ ಚಟುವಟಿಕೆಗಳು, ಡಿಸೆಕ್ಷನ್ವೀಕ್ಷಣೆ, ಮೈಸೂರಿನ ಪ್ರಮುಖಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು ಹಾಗುಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿದೆ.
ಇತ್ತೀಚಿಗೆ ಕಾರ್ಯಕ್ರಮದಸ್ವಾಗತ ಸಮಾರಂಭ ನಡೆದಿದ್ದು ಜೆಎಸ್ಎಸ್ ಎಎಚ್ಇಆರ್ನ ಕುಲಸಚಿವರು, ಡಾ.ಮಂಜುನಾಥ ಬಿ, ಡೀನ್ ಅಕಾಡೆಮಿಕ್ಸ್, ಡಾ.ವಿಶಾಲ್ ಕುಮಾರ್ ಗುಪ್ತಾ, ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಬಸವನಗೌಡಪ್ಪ, ಉಪ ಪ್ರಾಂಶುಪಾಲರಾದ ಡಾ.ಸುಮಾ ಎಂಎನ್ ಮತ್ತು ಡಾ.ಪ್ರವೀಣ್ ಕುಲಕರ್ಣಿ, ಆಡಳಿತಾಧಿಕಾರಿಗಳಾದಶ್ರೀ ಸತೀಶ್ ಚಂದ್ರ, ಉಪಸ್ಥಿತರಿದ್ದರು.ಸಮುದಾಯ ವೈದ್ಯಕೀಯ ಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸ್ಮಿತಾ ಎಂ.ಸಿ ಈಕಾರ್ಯಕ್ರಮದ ಸಂಯೋಜಕರಾಗಿದ್ದಾರೆ.