ಬೆಂಗಳೂರು, ಅ.25,2024: (www.justkannada.in news) ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಿ.ಪಿ.ಯೋಗೇಶ್ವರ, ಕರ್ನಾಟಕ ರಾಜಕೀಯದ “ಜಂಪಿಂಗ್ ಸ್ಟಾರ್” ಎಂದು ಪ್ರಸಿದ್ಧ.
ಬುಧವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ತೊರೆಯುತ್ತಾ ತನ್ನ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಸೇರುವ ಮೂಲಕ ಸುದ್ದಿಯಾಗಿದ್ದಾರೆ. ಇದು 25 ವರ್ಷಗಳ ರಾಜಕೀಯ ಜೀವನದಲ್ಲಿ ಅವರ ಐದನೇ ಪಕ್ಷಾಂತರ.
ಸಿ.ಪಿ.ಯೋಗೇಶ್ವರ, 1999ರಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ತನ್ನ ರಾಜಕೀಯ ಜೀವನ ಆರಂಭಿಸಿದರು. 2004ರಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಕೈ ಚಿನ್ಹೆಯಡಿ ಚುನಾವಣೆಗೆ ಸ್ಪರ್ಧೆ. 2009ರವರೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಸಿಪಿವೈ, ನಂತರ ಕರ್ನಾಟಕದಲ್ಲಿ ಆಧಿಕಾರದಲ್ಲಿದ್ದ ಬಿಜೆಪಿಗೆ ಸೇರ್ಪಡೆಗೊಂಡರು.
ಆದರೆ 2013ರ ವೇಳೆಗೆ, ಯೋಗೇಶ್ವರ್ ಬಿಜೆಪಿ ಬಗ್ಗೆ ಅಮಧಾನಗೊಂಡು, ರಾಜ್ಯದಲ್ಲಿ ಅಂಬೆಗಾಲಿಡುತ್ತಿದ್ದ ಸಮಾಜವಾದಿ ಪಕ್ಷ (ಎಸ್ಪಿ) ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸಿದರು. ಆಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತ ಅವರನ್ನು ಸೋಲಿಸಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡರು.
ಯೋಗೇಶ್ವರ್ ಅವರು 2018ರಲ್ಲಿ ಮತ್ತೆ ಬಿಜೆಪಿ ಸೇರ್ಪಡೆಗೊಂಡರು. ಆದರೆ ಚನ್ನಪಟ್ಟಣದ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋಲು ಅನುಭವಿಸಬೇಕಾಯಿತು. ಆದರೆ ಪಕ್ಷ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿತು.
ಇದೀಗ ಸಿಪಿವೈ ಮತ್ತೆ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ್ದು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಯೋಗೇಶ್ವರ ಅವರ 25 ವರ್ಷದ ರಾಜಕೀಯ ಜೀವನದಲ್ಲಿ ಅವರು ಒಂಬತ್ತು ಚುನಾವಣೆಯನ್ನು ಎದುರಿಸಿದ್ದಾರೆ, ಈ ಪೈಕಿ ಕೆಲವು ಗೆದ್ದಿದ್ದಾರೆ ಮತ್ತು ಕೆಲವು ಸೋತಿದ್ದಾರೆ. ತಮ್ಮ ನಿರಂತರ ಪಕ್ಷಾಂತರದ ನಡುವೆಯೂ ಅವರು ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜತೆಗೆ ಯೋಗೇಶ್ವರ್ ತಮ್ಮ ಪಕ್ಷ ಬದಲಾಯಿಸುವ ಹವ್ಯಾಸವನ್ನು ಜನ ಸೇವೆಗೆ ಅತ್ಯವಶ್ಯಕ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆ ಮೂಲಕ ತಾವೊಬ್ಬ “ಜಂಪಿಂಗ್ ಸ್ಟಾರ್” ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.
CP ಯೋಗೇಶ್ವರ ರಾಜಕೀಯ ಹಾದಿ: –
1999: ಸ್ವತಂತ್ರ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಜಯಿಸಿದರು.
2004: ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಾ ಚುನಾವಣೆಯಲ್ಲಿ ಸ್ಪರ್ಧಿಸಿದರು.
2008: ರಾಜ್ಯ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು.
2009: ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡರು.
2013: ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ. ಮಾಜಿ ಸಿಎಂ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಗೆಲುವು.
2018: ಮರಳಿ ಬಿಜೆಪಿಗೆ. HD ಕುಮಾರಸ್ವಾಮಿ ಎದುರು ಸೋಲು.
2024: BJP ತ್ಯಜಿಸಿ ಕಾಂಗ್ರೆಸ್ ಸೇರ್ಪಡೆ.
key words: “JUMPING STAR”, CP Yogeshwar, Channapatna, by-election, CONGRESS
SUMMARY:
“JUMPING STAR” CP Yogeshwar changed political parties, how many do you know.?
CP Yogeshwar, who contested the Channapatna by-election as a Congress candidate, is known as the “jumping star” of Karnataka politics. On Wednesday, he made headlines by quitting the Bhartiya Janata Party (BJP) and joining the Congress for the second time in his career. This is his fifth defection in 25 years of political career.