ಬೆಂಗಳೂರು, ಸೆಪ್ಟೆಂಬರ್ ೨೯, ೨೦೨೧ (www.justkannada.in): ಹೊಸ ಶಿಕ್ಷಣ ನೀತಿಯ (ಎನ್ಇಪಿ-೨೦೨೦) ನಿಯಮಾವಳಿಗಳ ಪ್ರಕಾರ ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಮಂಗಳವಾರದAದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಇನ್ಫೋಸಿಸ್ನೊಂದಿಗೆ ಸಂಯೋಜನೆ ಹೊಂದಲು ನಿರ್ಧರಿಸಿತು.
ಈ ಕುರಿತು ಮಾತನಾಡಿದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು, “ಕಾಲೇಜು ವಿದ್ಯಾರ್ಥಿಗಳಿಗಾಗಿ ೩,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಕೌಶಲ್ಯ ಅಭಿವೃದ್ಧಿ ಕೋರ್ಸ್ಗಳನ್ನು ಒಳಗೊಂಡಿರುವAತಹ ‘ಇನ್ಫೋಸಿಸ್ ಸ್ಪಿçಂಗ್ಬೋರ್ಡ್’ ವೇದಿಕೆಯ ಸೇವೆಗಳನ್ನು ಬಳಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಹಾಗೂ ಇನ್ಫೋಸಿಸ್ ಸಂಸ್ಥೆಯ ನಡುವೆ ಶೀಘ್ರದಲ್ಲೇ ಒಪ್ಪಂದಗಳಾಗಲಿವೆ,” ಎಂದು ತಿಳಿಸಿದರು.
ವಿಕಾಸ ಸೌಧದಲ್ಲಿ ಮಂಗಳವಾರ ಇನ್ಫೋಸಿಸ್ ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಈ ಒಪ್ಪಂದದಡಿ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಡಿಜಿಟಲ್ ಕಲಿಕೆಗೆ ಸುಗಮಗಾರಿಕೆಯನ್ನು ಒದಗಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನವನ್ನು ನೀಡಲಿದೆ. “ಇನ್ಫೋಸಿಸ್ ಸಂಸ್ಥೆ ರಾಜ್ಯದ ಕಾಲೇಜುಗಳಿಗೆ ೧೫,೦೦೦ ಕಂಪ್ಯೂಟರ್ಗಳನ್ನು ದೇಣಿಗೆ ನೀಡಲು ಒಪ್ಪಿಕೊಂಡಿದೆ,” ಎಂದು ಅಶ್ವತ್ಥನಾರಾಯಣ ವಿವರಿಸಿದರು.
‘ಇನ್ಫೋಸಿಸ್ ಸ್ಪಿçಂಗ್ಬೋರ್ಡ್’, ಕುರಿತು ಮಾತನಾಡಿದ ಸಚಿವರು, ಅದನ್ನು ಡಿಜಿಟಲ್ ಕಲಿಕಾ ಪರಿಹಾರಗಳು, ತಂತ್ರಜ್ಞಾನ ಆಧಾರಿತ ಜೀವನಕೌಶಲ್ಯ ಕೋರ್ಸ್ಗಳು, ಗೇಮಿಫಿಕೇಷನ್, ಲೈವ್ ತರಗತಿಗಳು, ಕೈಗಾರಿಕಾ ಪ್ರಮಾಣೀಕರಣ, ಮೇರ್ಸ್್ ಲ್ಯಾಬ್, ವೃತ್ತಿ ಮಾರ್ಗದರ್ಶನ ಹಾಗೂ ಉನ್ನತ ಶಿಕ್ಷಣದ ಆಯ್ಕೆಗಳು, ಇತ್ಯಾದಿಗಳಂತಹ ವಿಷಯಗಳನ್ನು ಒಳಗೊಂಡಿರುವ ಸಮಗ್ರ ಡಿಜಿಟಲ್ ಸಾಕ್ಷರತಾ ವೇದಿಕೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ ಈ ಒಪ್ಪಂದದ ಪ್ರಕಾರ, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಸೃಷ್ಟಿಸಲು ಗೇಮಿಫಿಕೇಷನ್ ಹಾಗೂ ವಿನ್ಯಾಸ ತತ್ವಗಳ ಬಳಕೆ ಹಾಗೂ ಕಾರ್ಯಪ್ರದರ್ಶನ ಫಲಿತಾಂಶಗಳೊAದಿಗೆ ಸಂಪರ್ಕಸಹಿತ ಕಲಿಕಾ ದತ್ತಾಂಶ, ತರಬೇತಿಗಾಗಿ ವರ್ಚ್ಯುಯಲ್ ರಿಯಾಲಿಟಿ (ವಿಆರ್) ಹಾಗೂ ವರ್ಧಿತ ವಾಸ್ತವಗಳನ್ನು (augmented reality (AR)) ಬಳಸಿಕೊಂಡು ಸ್ಮಾರ್ಟ್ ತರಗತಿಗಳನ್ನು ನಡೆಸಲು ಸನ್ನೆಸಹಿತ ಕಂಪ್ಯೂಟಿAಗ್ ಹಾಗೂ ಬಯೊಮೆಟ್ರಿಕ್ಸ್ ಅನ್ನು ಪರಿಚಯಿಸಲು ನೆರವಾಗಲಿದೆ, ಎಂದರು.
“ಜೊತೆಗೆ ಈ ಪ್ರಸ್ತಾಪಿತ ಒಪ್ಪಂದಗಳ ಭಾಗವಾಗಿ ಈ ವೇದಿಕೆಯಡಿ ಲಭ್ಯವಿರುವ ಆಟೋಮೇಷನ್ ಹಾಗೂ ರೊಬೊಟಿಕ್ ಸಾಧನಗಳನ್ನೂ ಸಹ ಬಳಸಿಕೊಳ್ಳಲಾಗುವುದು,” ಎಂದು ವಿವರಿಸಿದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಅವರು, “ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಅಭ್ಯಾಸಗಳ ವಿನಿಮಯದ ಸುಗಮಗಾರಿಕೆಗಾಗಿ ‘ಎನ್ಇಪಿ ಸಮುದಾಯ'”ವನ್ನು ಸ್ಥಾಪಿಸಲಾಗುವುದು. ಎನ್ಇಪಿ ಚೌಕಟ್ಟಿನ ಅನುಷ್ಠಾನಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಮಾರ್ಗದರ್ಶನವನ್ನು ಒದಗಿಸುವುದರ ಜೊತೆಗೆ, ಪ್ರತಿಭೆಯ ವೇಗವನ್ನು ಸಾಧಿಸಲು ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್) ಹಾಗೂ ಇನ್ಫೋಸಿಸ್ಗಳ ನಡುವೆ ಸಂಯೋಜನೆಯನ್ನು ಸ್ಥಾಪಿಸಲಾಗುವುದು,” ಎಂದು ವಿವರಿಸಿದರು.
ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್
key words: Karnataka government to work with Infosys for skill development as per NEP rules