ಬೆಂಗಳೂರು,ಡಿಸೆಂಬರ್,12,2020(www.justkannada.in): ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹೆಸರನ್ನು ವ್ಯಸನಮುಕ್ತ ಜಾಗೃತಿ ಮತ್ತು ಸಲಹಾ ಮಂಡಳಿ ಎಂದು ಬದಲಾಯಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿರುವ ಡಾ.ವೀರೇಂದ್ರ ಹೆಗ್ಡೆ ಅವರು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯೊಂದಿಗೆ ಹಲವಾರು ವರ್ಷದಿಂದ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು, ವ್ಯಸನಮುಕ್ತ ಶಿಬಿರಗಳನ್ನು ನಡೆಸಿಕೊಂಡು ಬಂದಿದೆ. ಪ್ರಸ್ತುತ ಶಿಬಿರಗಳಿಗೆ ಚಿಕಿತ್ಸಾ ಕೇಂದ್ರಗಳಿಗೆ ದಾಖಲಾಗುವವರಲ್ಲಿ ಬಹಳಷ್ಟು ಮಂದಿ ಮಾದಕ ವಸ್ತು ಸೇವನೆಗೆ ಒಳಗಾಗಿರುವುದನ್ನ ಗಮನಿಸಲಾಗಿದೆ. ಯುವ ಸಮಾಜ ಡ್ರಗ್ಸ್ ಹಾವಳಿಗೆ ಸಿಲುಕಿ ತಮ್ಮ ಜೀವನ ಜೊತೆಗೆ ಸಮಾಜದ ಮತ್ತು ಕುಟುಂಬಗಳ ನೆಮ್ಮದಿಯನ್ನು ಹಾಳು ಮಾಡುವುದನ್ನು ಗಮನಿಸಿದಾಗ ಮಾದಕ ವಸ್ತುಗಳ ಲಭ್ಯತೆ ಮತ್ತು ಬಳಕೆಯ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢವಾಗುತ್ತಿದೆ. ಇಂತಹ ಪರಿಸ್ಮಿತಿಯನ್ನು ತಡೆಗಟ್ಟಲು ಮುಂದಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಹೆಸರನ್ನು ವ್ಯಸನಮುಕ್ತ ಜಾಗೃತಿ ಮತ್ತು ಸಲಹಾ ಮಂಡಳಿ ಎಂಬುದಾಗಿ ಬದಲಾಯಿಸಿ ಮಂಡಳಿಯ ಕಾರ್ಯ ಚಟುವಟಿಕೆಯನ್ನ ವಿಸ್ತರಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಬಳಕೆ ಮಾಡುವವರು ದಂಧೆಯಾಗಿ ಮಾಡುವವರ ವಿರುದ್ಧ ಕೈಗೊಂಡಿರುವ ಶಿಸ್ತಿನ ಕ್ರಮಗಳು ಭಾರತ ದೇಶದ ಭಾರತ ದೇಶದ ಇತರೇ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಪತ್ರದಲ್ಲಿ ಡಾ. ವಿರೇಂದ್ರ ಹೆಗ್ಡೆ ಅವರು ಶ್ಲಾಘಿಸಿದ್ದಾರೆ.
English summary….
Rename the Karnataka State Bewerages Corporation Limited: Letter by Dr. Veerendra Heggade to CM
Bengaluru, Dec. 12, 2020 (www.justkannada.in): Dharmastala Dharmadhikari Dr. Veerendra Heggade has appealed to Chief Minister B.S. Yedyurappa, to rename the Karnataka State Bewerages Corporation Limited as Alcohol De-addiction Awareness and Advisory Board.
In his letter to the Chief Minister, Dr. Veerendra Heggade has stated that the Karnataka State Bewerages Corporation Limited has been involved in organizing alcohol deaddiction camps, in association with the Akhila Karnataka Janjagruti Vedike, a subsidiary of the Sri Kshetra Dharamastala Rural Development Programme. It is noticed that many youngsters who come to the camps and admit to the alcohol de-addiction treatment centers have fallen prey to narcotics as well, which is a very alarming issue. Hence, he has requested the Chief Minister to rename the Corporation and extend its activities.
Keywords: Dr. Veerendra Heggade/ Chief Minister B.S. Yedyurappa/ Alcohol De-addiction
Key words: Karnataka State Liquor Control Board-Letter -Dr. Virendra Hegde –CM bs yeddyurappa