A prominent member of the Bharatiya Janata Party (BJP) Actor and politician Khushbu has officially resigned from her position as a member of the National Commission for Women
ನವ ದೆಹಲಿ, ಆ.15,2024: (www.justkannada.in news) ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಮುಖ ಸದಸ್ಯೆ, ರಾಜಕಾರಣಿ ಕಂ ಚಿತ್ರನಟಿ ಖುಷ್ಬು ಸುಂದರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ದೃಢಪಡಿಸಿದೆ.
ಖುಷ್ಬು ಸುಂದರ್ ತಮ್ಮ ನಿರ್ಧಾರವನ್ನು ಟ್ವಿಟರ್ ಮೂಲಕ ಪ್ರಕಟಿಸಿದ್ದು, “ರಾಜಕೀಯದಲ್ಲಿ 14 ವರ್ಷಗಳ ಸುದೀರ್ಘ ಅವಧಿ ಕಳೆದಿರುವೆ. ನನ್ನ ಪಕ್ಷವಾದ ಬಿಜೆಪಿಗೆ ಸೇವೆ ಸಲ್ಲಿಸುವ ಉತ್ಸಾಹದಿಂದ ನಾನು @NCWIndia ಗೆ ರಾಜೀನಾಮೆ ನೀಡಿದ್ದೇನೆ” ಎಂದು ಬರೆದಿದ್ದಾರೆ.
ಎನ್‌ಸಿಡಬ್ಲ್ಯೂನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಜೆಪಿಯ ಚೆನ್ನೈನ ಕಛೇರಿಯಾದ ಕಮಲಾಲಯದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಖುಷ್ಭು, ಹೊಸ ಹುರುಪಿನೊಂದಿಗೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.
Key words: Actor and politician, Khushbu, resigned, from her position, as a member of, the National Commission for Women (NCW).
SUMMARY:
A prominent member of the Bharatiya Janata Party (BJP) Actor and politician Khushbu has officially resigned from her position as a member of the National Commission for Women (NCW).