ಕೊಡಗು,ಆ,31,2019(www.justkannada.in): ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಹಾರಂಗಿ ಜಲಾಶಯ ಭರ್ತಿಯಾದಹಿನ್ನೆಲೆ ಸಚಿವ ಸುರೇಶ್ ಕುಮಾರ್ ಹಾರಂಗಿ ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಿದರು
ಕುಶಾಲನಗರದ ಹಾರಂಗಿ ಜಲಾಶಯದ ಮುಂಭಾಗ ಇರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಸಚಿವ ಸುರೇಶ್ ಕುಮಾರ್ ನಂತರ ಜಲಾಶಯಕ್ಕೆ ಭಾಗಿನ ಅರ್ಪಣೆ ಮಾಡಿದರು. ಸಚಿವ ಸುರೇಶ್ ಕುಮಾರ್ ಗೆ ಶಾಸಕ ಅಪ್ಪಚ್ಚು ರಂಜನ್ ಡಿಸಿ ಅನೀಸ್ ಕಣ್ಮಣಿ ಜಾಯ್ ಹಲವರು ಸಾಥ್ ನೀಡಿದರು.
ಬಾಗೀನ ಅರ್ಪಿಸಿದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, ನಾನು ಬೆಂಗಳೂರಿನವನಾದ್ರೂ ಕಾವೇರಿಯ ಋಣ ನನ್ನ ಮೇಲೆ ತುಂಬಾ ಇದೆ. ಕಾವೇರಿ ಋಣ ತೀರಿಸಲು ನನಗೆ ಇದೊಂದು ಅವಕಾಶ. ಹೀಗಾಗಿಯೇ ನಾನು ಬಾಗೀನ ಅರ್ಪಿಸಲು ಸಂತೋಷ ಪಡುತ್ತೇನೆ. ಹಾರಂಗಿ ತುಂಬಿ ಯಾವುದೇ ಸಮಸ್ಯೆ ಸೃಷ್ಟಿಸದಿರಲಿ, ಈ ಭಾಗದ ರೈತರ ಬದುಕು ಹಸನಾಗಲಿ ಅಂತಾ ಕೇಳಿಕೊಳ್ಳುತ್ತೇನೆ ಎಂದರು.
ಡಿಕೆಶಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ….
ಮಾಧ್ಯಮದ ಜತೆ ಮಾತನಾಡಿದ ಡಿಕೆಶಿ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸುರೇಶ್ ಕುಮಾರ್, ನಾವು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಡಿಕೆಶಿ ಅವ್ರಿಗೆ ಶುಭವಾಗಲಿ ಎಂದು ಇಡಿ ಸಂಕಷ್ಟಕ್ಕೆ ಸಿಲುಕಿರುವ ಶಾಸಕ ಡಿ.ಕೆ.ಶಿವಕುಮಾರ್ ಗೆ ಶುಭ ಹಾರೈಸಿದರು.
ರಾಜ್ಯದ ಸಮಸ್ಯೆ ಪಿಎಂ ಗಮನಕ್ಕೆ ತರುವಲ್ಲಿ ರಾಜ್ಯ ವಿಫಲ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ಈಗಾಗಲೇ ರಾಜ್ಯದ ಸಮಸ್ಯೆಯನ್ನ ನರೇಂದ್ರ ಮೋದಿ ಗಮನಕ್ಕೆ ತರಲಾಗಿದೆ. ಕೇಂದ್ರದ ತಂಡ ಕೂಡ ರಾಜ್ಯದಲ್ಲಿ ಪರಿಶೀಲನೆ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರ 536 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, 100 ಕೋಟಿ ಬಿಡುಗಡೆ ಮಾಡಿದೆ. ಸೆ.7 ಕ್ಕೆ ಮೋದಿ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ಮತ್ತೊಮ್ಮೆ ನಾವು ಹೆಚ್ಚಿನ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದರು.
Key words: kodagu-harangi dam-fullpill-minister-Suresh Kumar-worship