ಕೃಷಿ ಸಮ್ಮಾನ್ ನಿಧಿಯ ಕಡತಕ್ಕೆ ಸಹಿ: ರೈತರ ಕಲ್ಯಾಣಕ್ಕೆ ಬದ್ಧ-ಪ್ರಧಾನಿ ನರೇಂದ್ರ ಮೋದಿ.

ನವದೆಹಲಿ,ಜೂನ್,10,2024 (www.justkannada.in): 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿ ನರೇಂದ್ರ ಮೋದಿ ಅವರು  ರೈತ ಕಲ್ಯಾಣಕ್ಕೆ ಸಂಬಂಧಿಸಿದ ಕಡತಕ್ಕೆ ಮೊದಲ ಸಹಿ ಹಾಕಿದ್ದಾರೆ.

ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿಗೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ಇದರಿಂದ 9.3  ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಸುಮಾರು 2,000 ಕೋಟಿ ರೂ. ಮೌಲ್ಯದ ನಿಧಿಗೆ ಸಹಿ ಹಾಕಿದ್ದಾರೆ.  ಈ ಮೂಲಕ ರೈತರಿಗೆ 20 ಸಾವಿರ ಕೋಟಿ ರೂ ಬಿಡುಗಡೆಯಾಗಿದೆ. ಈ ವರ್ಷದ 2ನೇ ಕಂತು ಇದಾಗಿದೆ.

ಈ ಕಡತಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಆದ್ದರಿಂದ ಅಧಿಕಾರ ವಹಿಸಿಕೊಂಡ ತಕ್ಷಣ ಮೊದಲ ಕಡತ ರೈತ ಕಲ್ಯಾಣಕ್ಕೆ ಸಂಬಂಧಿಸಿದ್ದಾಗಿದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ನಾವು ಬಯಸುತ್ತೇವೆ ಎಂದು ಹೇಳಿದರು.

Key words: Krishi Samman Nidhi, PM, Modi, farmers