ಬೆಂಗಳೂರು,ಜೂನ್,13,2024 (www.justkannada.in): ಲಾಸ್ಯ ಸಂಸ್ಥೆಯ ಪುರುಷ ಕಲಾವಿದರಿಗಾಗಿ “ಲಾಸ್ಯ ಪುರುಷ” ಉತ್ಸವವನ್ನ ಆಯೋಜಿಸಿದೆ.
ಮೊದಲ ಆವೃತ್ತಿಯು ಇದೇ ತಿಂಗಳ ಜೂನ್ 16ರಂದು ಮಲ್ಲೇಶ್ವರದ ಸೇವಾ ಸದನ ಸಭಾಂಗಣದಲ್ಲಿ, ಸಂಜೆ 5ಕ್ಕೆ ಅನಾವರಣಗೊಳ್ಳುತ್ತಿದೆ. ಸಾಂಕೇತಿಕವಾಗಿ ನಿಗದಿ ಪಡಿಸಿರುವ ಪ್ರವೇಶ ದರದ ಮೊತ್ತವನ್ನು ಲಾಸ್ಯ ಸಂಸ್ಥೆಯ ‘ಹಳ್ಳಿಯೆಡೆಗೆ ಲಾಸ್ಯ’ ಕಾರ್ಯಕ್ರಮದ ಮೂಲಕ, ಹಳ್ಳಿಗಳ ಸರಕಾರೀ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತದೆ.
‘ಲಾಸ್ಯ ಪುರುಷ’ ಪ್ರಶಸ್ತಿಯಲ್ಲಿ ಪ್ರತಿಯೊಬ್ಬ ಸಾಧಕರಿಗೆ 15 ಸಾವಿರ ರೂ. ನಗದು ಪ್ರಶಸ್ತಿ ಹಾಗೂ ಫಲ ತಾಂಬೂಲಗಳನ್ನು ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಗುರು ಕಲವಕಲ್ವ ಮುರುಳಿ ಮೊಹನ್, ಕಲಾಯೋಗಿ ಅಚಾರ್ಯ ಪುಲಿಕೇಶಿ ಕಸ್ತೂರಿ, ಸುಗ್ಗನಹಳ್ಳಿ ಷಡಕ್ಷರಿ, ಚೇತನ್ ಗಂಗಾಟ್ಕರ್ ಅವರನ್ನ ಗೌರವಿಸಲಾಗುತ್ತದೆ.
ಲಾಸ್ಯ ಸಂಸ್ಥೆಯ ಬದ್ಧತೆಯ ಕಲಾ ಉತ್ಸವಗಳ ಆಯೋಜನೆಗೆ ಹೊಸ ಸೇರ್ಪಡೆಯೇ, ಲಾಸ್ಯ ಪುರುಷ. ಲಾಸ್ಯ ಪುರುಷ ಉತ್ಸವವು, ಕಲಾ ಪ್ರಪಂಚದಲ್ಲಿ ಸಾಧನೆ ಮಾಡಿದ, ಮಾಡುತ್ತಿರುವ ಪುರುಷ ಕಲಾವಿದರಿಗಾಗಿಯೇ ಮೀಸಲಾಗಿರುವ ಉತ್ಸವವಾಗಿದೆ ಎಂದು ಲಾಸ್ಯ ಅಕಾಡೆಮಿ ಆಫ್ ಡಾನ್ಸ್ (ರಿ)(ಟ್ರಸ್ಟ್) ನ ಸಂಸ್ಥಾಪಕ-ನಿರ್ದೇಶಕಿ ಡಾ. ಲಕ್ಷ್ಮಿ ರೇಖಾ ಅರುಣ್ ತಿಳಿಸಿದ್ದಾರೆ.
Key words: Lasya Purusha, festival, male, artists