ಮೈಸೂರು, ಮೇ 7,2022(www.justkannada.in): ಜೂನ್ ತಿಂಗಳಲ್ಲಿ ಇಡೀ ರಾಜ್ಯದಲ್ಲಿ ವಿದ್ಯುತ್ ಚಾಲೆಂಜ್ ಸೆಂಟರ್ ಗಳ ಅಭಿಯಾನವನ್ನು ಪ್ರಾರಂಭಿಸಿ 30ರೊಳಗಾಗಿ ಕರ್ನಾಟಕದಲ್ಲಿ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭ ಮಾಡಲಿದ್ದೇವೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರು ತಿಳಿಸಿದರು.
ಕಡಕೋಳದ ಕೆಇಬಿಇಎ ತರಬೇತಿ ಕೇಂದ್ರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಅದರ ಚಾರ್ಜಿಂಗ್ ತಂತ್ರಜ್ಞಾನಗಳ ಕುರಿತು ವಿಚಾರ ಸಂಕೀರ್ಣ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ವಾಯುಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಎಲೆಕ್ಟಿಕಲ್ ವಾಹನಗಳ ಚಾರ್ಜಿಂಗ್ ಸ್ಟೆಷನ್ ಆರಂಭಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು. ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮೇಲೆ ಮಾತ್ರವಲ್ಲದೇ ಚಾರ್ಜಿಂಗ್ ಸ್ಟೇಷನ್ಗಳ ನಿರ್ಮಾಣದ ಮೇಲೂ ಆಕರ್ಷಕ ಸಬ್ಸಡಿಗಳನ್ನು ನೀಡುತ್ತಿದೆ. ಈಗಾಗಲೇ ಹೆಚ್ಚು ಸ್ಟೇಷನ್ ನಿರ್ಮಾಣ ಮಾಡಲು ಸಭೆಗಳನ್ನು ಮಾಡಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರ, ರಾಷ್ಟ್ರೀಯ , ರಾಜ್ಯ ಹೆದ್ದಾರಿ, ಪ್ರವಾಸಿ ತಾಣಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ, ಸರ್ಕಾರಿ ಕಚೇರಿಗಳಲ್ಲಿ ಎಲೆಕ್ಟ್ರಿಕ್ ವಾಹನ ಉಪಯೋಗ ಮಾಡುವ ಕುರಿತು ಚಿಂತಿಸಲಾಗಿದೆ . ರಾಜ್ಯದ ಎಲ್ಲ ಭಾಗಗಳಲ್ಲಿ ಕೂಡ ವಿದ್ಯುತ್ ಚಾರ್ಜಿಂಗ್ ಸೆಂಟರ್ಗಳನ್ನು ಪ್ರಾರಂಭ ಮಾಡಬೇಕು ಎಂಬ ಪೂರ್ವ ತಯಾರಿಯನ್ನು ದೊಡ್ಡಪ್ರಮಾಣದಲ್ಲಿ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ ದೇವೇಗೌಡ, ತಾಂತ್ರಿಕ ನಿರ್ದೇಶಕರಾದ ಸೋಮಶೇಖರ್, ಎಂ.ಎಲ್.ಎ ಹರ್ಷವರ್ಧನ್, ಎಂ.ಎಲ್. ಸಿ ಮಂಜೇಗೌಡ. ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷರಾದ ಮಂಜಪ್ಪ ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Key words: launch – electric- charging center -campaign –June-Minister – Sunil Kumar