ಬೆಂಗಳೂರು,ಜುಲೈ,29,2022(www.justkannada.in): ರಾಜ್ಯದಲ್ಲಿ ಸರಣಿ ಹತ್ಯೆಗಳು ಆಗ್ತಿವೆ. ಸರ್ಕಾರದಿಂದ ಯಾರನ್ನೂ ರಕ್ಷಣೆ ಮಾಡಲು ಆಗುತ್ತಿಲ್ಲ. ಬಸವರಾಜ ಬೊಮ್ಮಾಯಿ ದುರ್ಬಲ ಸಿಎಂ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಕರಾವಳಿಯಲ್ಲಿ ಸಾಲು ಸಾಲು ಕೊಲೆ ಪ್ರಕರಣ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯದಲ್ಲಿ ಸಂಫೂರ್ಣವಾಗಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸರ್ಕಾರದಿಂದ ಯಾರನ್ನೂ ರಕ್ಷಣೆ ಮಾಡಲು ಆಗುತ್ತಿಲ್ಲ . ಇಂಟಲಿಜೆನ್ಸ್ ಕೂಡ ಸಿಎಂ ಬಳಿಯೇ ಇದೆ. ಆದರೇ ರಾಜ್ಯದಲ್ಲಿ ಸರಣಿ ಹತ್ಯೆಗಳು ಆಗ್ತಿವೆ. ಇದರ ಹೊಣೆಯನ್ನ ಸಿಎಂ ಬೊಮ್ಮಾಯಿ ಹೊರಬೇಕು ಎಂದರು.
ಆರಗ ಜ್ಞಾನೇಂದ್ರ ಸಚಿವರಾಗಿ ಮಂದುವರೆಯಲು ನೈತಿಕತೆ ಇಲ್ಲ. ಸರ್ಕಾರ ಕೂಡಲೇ ಕೊಲೆ ಆರೋಪಿಗಳನ್ನ ಪತ್ತೆ ಹಚ್ಚಬೇಕು. ಫಾಜಿಲ್, ಪ್ರವೀಣ್ ಯಾರೇ ಆದರೂ ಎಲ್ಲವೂ ಜೀವಗಳೇ. ಮತಾಂಧ ಶಕ್ತಿಗಳು ಯಾರೇ ಆಗಲಿ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.
Key words: Law and order –collapsed- state: Bommai –weak- CM- Siddaramaiah
ENGLISH SUMMARY…
CM Bommai is inefficient to run the Govt.: State Govt. directly responsible for the Mangaluru killing – CM Siddaramaiah
Mysuru, July 29, 2022 (www.justkannada.in): “The State Government has expired, the administration is completely destroyed, CM Bommai doesn’t have the capability to run the government. The State Government is directly responsible for the Mangaluru clashes,” observed leader of the opposition Siddaramaiah.
Speaking to the press persons at the Mandakalli airport in Mysuru regarding the Fazil murder case, he expressed his view that it is the failure of the Home Minister. There is no government in the state. The State Government has expired. Law and order has failed completely. A murder has taken place when the CM was in town. Is it not failure of the intelligence? Is it not the failure of the CM, Home Minister? A situation has erupted where people are scared to even come out of their houses,” he lashed out.
Keywords: Siddaramaiah/ CM Bommai/ inefficient/ incapable